ದೋಣಿ ದುರಂತದಲ್ಲಿ 22 ಜನರ ಸಾವು: 61 ಜನರನ್ನು ರಕ್ಷಿಸಿದ ಕಾವಲು ಪಡೆಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಲಿಬಿಯಾ ಕರಾವಳಿಯಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ಮಾಲಿ ದೇಶದ 22 ವಲಸಿಗರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.
ಜೂನ್ 22 ರಂದು ಟುನೀಶಿಯಾದ ಗಡಿಯ ಸಮೀಪವಿರುವ ಲಿಬಿಯಾದ ನಗರವಾದ ಜುವಾರಾದಿಂದ ರಬ್ಬರ್ ಬೋಟ್‌ನಲ್ಲಿ ಹೊರಟಿದ್ದ ಪ್ರವಾಸಿಗರು ಮಾರ್ಗಮಧ್ಯೆ ಸಾಕಷ್ಟು ಸಾವು-ನೋವುಗಳನ್ನು ಅನುಭವಿಸಿದ್ದಾರೆ. ಈ ಸಂದರ್ಭದಲ್ಲಿ ನಿರ್ಜಲೀಕರಣ ಮತ್ತು ನೀರಿ ಮುಳುಗಿ 22 ಮಂದಿ ಸಾವನ್ನಪ್ಪಿದ್ದಾರೆ. ಸಮುದ್ರದಲ್ಲಿ ಒಂಬತ್ತು ದಿನಗಳ ಹೋರಾಡಿ ಜೀವ ಉಳಿಸಿಕೊಂಡಿದ್ದ 61 ಜನರನ್ನು ಲಿಬಿಯಾದ ಕೋಸ್ಟ್‌ಗಾರ್ಡ್‌ಗಳು ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ ಎಂದು ವಿಶ್ವಸಂಸ್ಥೆಯ ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!