spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರೈತರ ಉತ್ಪಾದನೆಗೆ ತಕ್ಕಂತೆ ರಪ್ತು, ಮಾರುಕಟ್ಟೆ ಹೆಚ್ಚಿಸಲು ಯೋಜನೆ: ಸಚಿವೆ ಶೋಭಾ ಕರಂದ್ಲಾಜೆ 

- Advertisement -Nitte

ಹೊಸದಿಗಂತ ವರದಿ, ಅಂಕೋಲಾ:

ಕೋವಿಡ್ ನಂತಹ ಕಷ್ಟಕರ ಪರಿಸ್ಥಿತಿಯಲ್ಲಿ ದೇಶ ಕೃಷಿ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದು 305 ಮಿಲಿಯನ್ ಮೆಟ್ರಿಕ್ ಟನ್ ಉತ್ಪಾದನೆ ಮಾಡಲಾಗಿದೆ ಅದೇ ರೀತಿ 326 ಮಿಲಿಯನ್  ಮೆಟ್ರಿಕ್ ಟನ್ ತರಕಾರಿ ಹಣ್ಣುಗಳ ಉತ್ಪಾದನೆ ಮಾಡಲಾಗಿದೆ ರೈತರ ಉತ್ಪಾದನೆಗೆ ತಕ್ಕಂತೆ ರಪ್ತು ಮತ್ತು ಮಾರುಕಟ್ಟೆ ಹೆಚ್ಚಿಸಲು ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಕೃಷಿ  ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ  ಹೇಳಿದ್ದಾರೆ.
ಅವರು ಅಂಕೋಲಾದ ವಂದಿಗೆ ಪಂಚಾಯತ ಹೊಸಗದ್ಧೆ ಬೂತ್ ಅಧ್ಯಕ್ಷ ಸೋಮೇಶ್ವರ ಗೌಡ ರವರ ಮನೆಯಲ್ಲಿ ಪಕ್ಷದ ಧ್ವಜಾರೋಹಣ ಮತ್ತು ನಾಮಫಲಕ ಅಳವಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಚಿವರು ವೃಕ್ಷಾರೋಪಣ ನಡೆಸಿದರು. ಈ ಸಂದರ್ಭದಲ್ಲಿ  ಸಚಿವರನ್ನು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚ ಕಾರ್ಯಕಾರಿಣಿ ಸದಸ್ಯ ರಾಜೇಂದ್ರ ನಾಯ್ಕ ರವರು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮ ದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ್ ನಾಯಕ್.ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಗೋವಿಂದ ನಾಯ್ಕ.ಮಂಡಲ ಅಧ್ಯಕ್ಷ  ಸಂಜಯ್ ನಾಯ್ಕ ಪ್ರಮುಖರಾದ  ಭಾಸ್ಕರ ನಾರ್ವೆಕರ, ಜಗದೀಶ್ ನಾಯಕ್ , ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ ನಾಯಕ, ಪುರಸಬೆ ಉಪಾಧ್ಯಕ್ಷೆ ರೇಖಾ ಗಾಂವಕರ.ಪುರಸಬೆ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಾ ನಾಯ್ಕ.ರಾಜೇಶ್ವರಿ ಕೇಣಿಕರ.ಅನುರಾಧಾ ನಾಯ್ಕ.ರಾಘವೇಂದ್ರ ಭಟ.ರಾಮಚಂದ್ರ ಹೆಗಡೆ.ಗಣಪತಿ ನಾಯ್ಕ.ದಾಮೋದರ ರಾಯ್ಕರ.ನಾಗೇಶ್ ಕಿಣಿ.ಹಾಗೂ ಪಕ್ಷದ ಪ್ರಮುಖರು ಕಾರ್ಯಕರ್ತರು ಭಾಗವಹಿಸಿದ್ದರು

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss