Saturday, September 23, 2023

Latest Posts

ಕೆನ್ನೆಗೆ ಹೊಡೆದಿದ್ದಕ್ಕೆ ಮದುವೆ ಕ್ಯಾನ್ಸಲ್: ‘ಥಪ್ಪಡ್’ ಸಿನಿಮಾ ರೀತಿ ರಿಯಲ್ ಘಟನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮದುವೆ ಫಿಕ್ಸ್ ಆದಾಗಿನಿಂದಲೂ ಹುಡುಗ-ಹುಡುಗಿ ಅನ್ಯೂನ್ಯವಾಗಿಯೇ ಇರುತ್ತಾರೆ. ಆದರೆ ಮುಂದೊಂದು ದಿನ ಯಾವುದೋ ಒತ್ತಡದಲ್ಲಿ ಹುಡುಗ ಹುಡುಗಿ ಕೆನ್ನೆಗೆ ಹೊಡೆಯುತ್ತಾನೆ. ಅಲ್ಲಿಗೆ ಅವರಿಬ್ಬರ ಸಂಬಂಧ ಮುಗಿದೇ ಹೋಗುತ್ತದೆ!

ಸಿನಿಮಾ ಕಥೆ ಎನಿಸಿತಾ? ಹೌದು, ಬಾಲಿವುಡ್‌ನಲ್ಲಿ ಬಂದ ಥಪ್ಪಡ್ ಸಿನಿಮಾ ರೀತಿ ತಮಿಳುನಾಡಿನಲ್ಲಿಯೂ ನಿಜ ಘಟನೆಯೊಂದು ನಡೆದಿದೆ. ತಮಿಳುನಾಡಿನ ಕಡಲೂರು ಜಿಲ್ಲೆಯ ಪನ್ರುತಿ ಯಲ್ಲಿ ಇಂಜಿನಿಯರ್ ಜೊತೆ ವಿವಾಹ ನಿಶ್ಚಯವಾಗಿತ್ತು. ವಿವಾಹದ ಹಿಂದಿನ ದಿನ ಆರತಕ್ಷತೆ ಇದ್ದು, ವಧು ಕೂಡ ತನ್ನ ಸ್ನೇಹಿತರು, ಕುಟುಂಬದವರ ಜೊತೆ ಡ್ಯಾನ್ಸ್ ಮಾಡಿದ್ದಾಳೆ. ಇದನ್ನು ಕಂಡು ಸಿಟ್ಟಾದ ವರ ಡ್ಯಾನ್ಸ್ ನಿಲ್ಲಿಸುವಂತೆ ಹೇಳಿ ಸ್ಟೇಜ್ ಮೇಲೆಯೇ ಆಕೆಯ ಕೆನ್ನೆಗೆ ಹೊಡೆದಿದ್ದಾನೆ.

ಅನಿರೀಕ್ಷಿತವಾಗಿ ವರ ಈ ರೀತಿ ನಡೆದುಕೊಂಡಿದಕ್ಕೆ ವಧು ಈ ಮದುವೆಯೇ ಬೇಡ ಎಂದು ನಿರ್ಧರಿಸಿದ್ದಾಳೆ. ರಾತ್ರಿಯೇ ಮದುವೆ ಮನೆ ಬಿಟ್ಟು ಹೊರಟಿದ್ದಾಳೆ. ಮರುದಿನ ಅದೇ ಮಹೂರ್ತಕ್ಕೆ ಆಕೆಯ ಪೋಷಕರು ದೂರದ ಸಂಬಂಧಿಯೊಂದಿಗೆ ವಿವಾಹ ಮಾಡಿಸಿದ್ದಾರೆ. ಒಂದೇ ಹೊಡೆತ ಎಂದು ಜನ ಹೇಳಿದರೂ, ಅವನಿಗೆ ಹೊಡೆಯಲು ಅಧಿಕಾರ ಇಲ್ಲ ಎಂದು ವಧು ಹೇಳಿದ್ದು, ಆಕೆ ನಡೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!