ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದ ಬಳಿಕ ಅಲ್ಲಿನ ಜನರು ದೇಶ ಬಿಡುತ್ತಿದ್ದು, ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜನ ಸಂದಣಿಯಾಗುತ್ತಿದೆ. ಆದರೆ ಮಹಿಳೆಯರಿಗೆ ದೇಶ ಬಿಡುವುದು ಕಷ್ಟವಾಗಿದೆ.
ಕಾಬೂಲ್ ವಿಮಾನ ನಿಲ್ದಾಣದಲ್ಲಿ ಒಂಟಿ ಮಹಿಳೆ ಹಾಗೂ ಹುಡುಗಿಯರಿಗೆ ಪ್ರವೇಶ ಸಿಗ್ತಿಲ್ಲ. ಇದ್ರಿಂದ ತಪ್ಪಿಸಿಕೊಳ್ಳಲು ಕೆಲ ಹುಡುಗಿಯರನ್ನು ಒತ್ತಾಯ ಪೂರ್ವಕವಾಗಿ ಅಲ್ಲಿರುವ ಯಾವುದೋ ವ್ಯಕ್ತಿಗೆ ಮದುವೆ ಮಾಡಲಾಗ್ತಿದೆ. ಕೆಲ ಹುಡುಗಿಯರು, ಅಪರಿಚಿತನ ಪತ್ನಿಯೆಂದು ಸುಳ್ಳು ಹೇಳಿ ವಿಮಾನ ಏರುತ್ತಿದ್ದಾರೆ.
ಹೇಗಾದರೂ ಮಾಡಿ ತಾಲಿಬಾನಿ ಉಗ್ರರಿಂದ ತಪ್ಪಿಸಿಕೊಳ್ಳಬೇಕೆಂಬ ಹತಾಷೆಯಲ್ಲಿ ಕಾಬೂಲ್ ನಗರದ ಹೊರವಲಯದಲ್ಲಿ ತಲೆ ಎತ್ತಿದ್ದ ವಲಸೆ ಶಿಬಿರಗಳಲ್ಲಿ ತಂಗಿದ್ದ ಹಲವಾರು ಆಫ್ಘನ್ ಮಹಿಳೆಯರು ಅನಿವಾರ್ಯವಾಗಿ ಮದುವೆಯಾಗುವ ಸ್ಥಿತಿ ನಿರ್ಮಾಣವಾಗಿತ್ತು, ಮದುವೆಯಾದರೆ ಗಂಡನ ಜೊತೆ ಹೋಗಲು ಬೇರೆ ದೇಶಕ್ಕೆ ಹೋಗಲು ಸುಲಭವಾಗುತ್ತದೆ ಎನ್ನುವ ಕಾರಣಕ್ಕೆ ಅವರು ಒಲ್ಲದ ಮನ್ಸಸ್ಸಿನಿಂದ ಮದುವೆಯಾಗುತ್ತಿದ್ದರು ಎಂದು ಸಿ ಎನ್ ಎನ್ ಸುದ್ದಿವಾಹಿನಿ ವರದಿ ಮಾಡುವ ಮೂಲಕ ಅಮೆರಿಕ ಗೃಹ ಇಲಾಖೆಯನ್ನು ಎಚ್ಚರಿಸಿದೆ. ಸದರಿ ವಿಷಯ ತನ್ನ ಗಮನಕ್ಕೆ ಬಂದ ನಂತರ ಯುಎಸ್ ಗೃಹ ಇಲಾಖೆಯು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಈ) ಅನ್ನು ಜಾಗೃತಗೊಳಿಸಿದೆ.
ವಿಮಾನ ನಿಲ್ದಾಣಕ್ಕೆ ಬಂದ ಕುಟುಂಬಸ್ಥರು, ಮಗಳನ್ನು ಒತ್ತಾಯದ ಮದುವೆಗೆ ಒಪ್ಪಿಸುತ್ತಿದ್ದಾರೆ. ಅಫ್ಘಾನಿಸ್ತಾನದಿಂದ ಮೊದಲು ಯುಎಇಗೆ ಬಂದು ನಂತ್ರ ಅಮೆರಿಕಾಕ್ಕೆ ಹೋದ ಅನೇಕ ಮಹಿಳೆಯರು ಮದುವೆಯಾಗಿದ್ದಾರೆ ಎನ್ನಲಾಗ್ತಿದೆ. .
ತಾಲಿಬಾನ್ ಆಡಳಿತ, ಮಹಿಳೆಯರ ಜೀವನವನ್ನು ನರಕ ಮಾಡಿದೆ. ಅಫ್ಘಾನಿಸ್ತಾನದಲ್ಲಿ ಮಹಿಳೆಯರು ನರಕ ಅನುಭವಿಸುತ್ತಿದ್ದಾರೆ.