ಆಪ್ ನಾಯಕ ರಾಘವ್ ಚಡ್ಡಾ ಜೊತೆ ಮದುವೆ?: ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಮತ್ತು ಆಪ್ ನಾಯಕ ರಾಘವ್ ಚಡ್ಡಾ ನಡುವಿನ ಮದುವೆ ವಿಚಾರ ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು.ಇಬ್ಬರೂ ಸದ್ಯದಲ್ಲೇ ಹಸೆಮಣೆ ಏರುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

ಆದರೆ ಇಬ್ಬರೂ ಎಲ್ಲಿಯೂ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಇತ್ತೀಚೆಗೆ ಇಬ್ಬರೂ ಮುಂಬೈ ವಿನಾ ನಿಲ್ದಾಣದಲ್ಲಿ ಕಾಣಿಸಿಕೊಳ್ಳುವ ಮೂಲಕ ಮದುವೆ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದ್ದರು. ಇದೀಗ ನಟಿ ಪರಿಣೀತಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇತ್ತೀಚೆಗೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಪರಿಣೀತಿ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಜೀವನದ ಬಗ್ಗೆ ಚರ್ಚೆ ಮಾಡುವುದು ಮತ್ತು ತೀರ ವೈಯಕ್ತಿಕ ವಿಚಾರ ಚರ್ಚೆ ಮಾಡುವ ಬಗ್ಗೆ ಒಂದು ಗೆರೆ ಇದೆ ಎಂದು ಹೇಳಿದ್ದಾರೆ. ಕಲ್ಪನೆಗೆ ಕಾರಣವಾದರೆ ಮಾತ್ರ ನಾನು ಸ್ಪಷ್ಟೀಕಣ ನೀಡುತ್ತೇನೆ. ಅನಗತ್ಯವಾಗಿ ನಾನು ಯಾವುದರ ಬಗ್ಗೆಯೂ ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದ್ದಾರೆ.

ಮಾಧ್ಯಮಗಳು ನನ್ನ ಜೀವನವನ್ನು ಚರ್ಚಿಸುವ ಮತ್ತು ಕೆಲವೊಮ್ಮೆ ತೀರಾ ವೈಯಕ್ತಿಕವಾಗಿ ಚರ್ಚೆ ಮಾಡುವ ನಡುವೆ ತೆಳುವಾದ ಗೆರೆ ಇದೆ. ಅಗೌರವ ಸಂಭವಿಸಿದಲ್ಲಿ, ಯಾವುದೇ ತಪ್ಪು ಕಲ್ಪನೆಗಳಿದ್ದರೆ ನಾನು ಸ್ಪಷ್ಟಪಡಿಸುತ್ತೇನೆ, ಅನಗತ್ಯವಾಗಿ ಸ್ಪಷ್ಟೀಕರಣ ನೀಡಲು ನಾನು ಹೋಗಲ್ಲ ಎಂದು ಹೇಳಿದ್ದಾರೆ.

ಇತ್ತೀಚಿಗಷ್ಟೆ ಪಾಪರಾಜಿಗಳು ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಪರಿಣೀತಿ ನಗುತ್ತಾ ಯಾವುದೇ ಪ್ರತಿಕ್ರಿಯೆ ನೀಡಿದೆ ಹಾಗೆ ಹೊರಟು ಹೋಗಿದ್ದರು. ಇದೀಗ ಮಾಧ್ಯಮಕ್ಕೆ ನೀಡಿದ ಪ್ರತಿಕ್ರಿಯೆಯಲ್ಲೂ ಮದುವೆ ವಿಚಾರ ತಳ್ಳಿ ಹಾಕಿಲ್ಲ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!