RELATIONSHIP | ಮದುವೆ ವರ್ಕೌಟ್‌ ಆಗೋದು ಸುಲಭ ಅಲ್ಲ, ಈ ಸೀಕ್ರೆಟ್‌ ವಿಷಯಗಳನ್ನು ಯಾರೂ ನಿಮ್ಗೆ ಹೇಳೋದಿಲ್ಲ..

ಇತ್ತೀಚೆಗೆ ದೇಶದಲ್ಲಿ ಡಿವೋರ್ಸ್‌ ಸಂಖ್ಯೆ ಹೆಚ್ಚಾಗುತ್ತಿವೆ. ದೊಡ್ಡ ದೊಡ್ಡ ಕಾರಣಗಳಿಂದ ಹಿಡಿದು ಸಣ್ಣ್‌ ಕಾರಣಗಳಿಗೂ ಜನ ಡಿವೋರ್ಸ್‌ ನೀಡುತ್ತಾರೆ. ಮದುವೆಯಾಗೋ ಮುನ್ನ ಈ ವಿಷಯಗಳ ಬಗ್ಗೆ ಗಮನ ಹರಿಸಿ. ಇದು ನಿಮ್ಮ ಕೈಲಿ ಸಾಧ್ಯ ಎಂದಾದರೆ ಮಾತ್ರ ಮದುವೆಯಾಗಿ..

ಟೈಮ್‌ ಕೊಡ್ಬೇಕು, ಮನೆ ಹಾಸ್ಟೆಲ್‌ ಅಲ್ಲ, ಬಂದ, ಹೋದ, ಒಟ್ಟಿಗೇ ಕೆಲಸ ಮಾಡಿದ. ಇಷ್ಟೇ ಅಲ್ಲ, ಇಬ್ಬರೂ ಕ್ವಾಲಿಟಿ ಟೈಮ್‌ ಸ್ಪೆಂಡ್‌ ಮಾಡ್ಬೇಕು.

ಮಾತಾಡಬೇಕು, ನಾನು ಮಾತು ಕಮ್ಮಿ, ನನ್ನ ಮೌನವನ್ನು ಅವರೇ ಅರ್ಥ ಮಾಡಿಕೊಳ್ಳಲಿ ಅನ್ನೋದೆಲ್ಲ ಸುಮ್ಮನೆ.. ಇಬ್ಬರೂ ಮಾತನಾಡಿ,ಕೂಲ್‌ ಆಗಿ ಬಗೆಹರಿಸಿಕೊಳ್ಳಿ.

ಆಕೆ ಅಥವಾ ಆತನ ಮೇಲೆ ಪ್ರೀತಿ ಕಮ್ಮಿ ಜಾಸ್ತಿ ಆಗಬಹುದು ಆದರೆ ಗೌರವ ಮಾತ್ರ ಕಡಿಮೆಯಾಗಬಾರದು.

ಅವರ ಪ್ರೈವೆಸಿ ರೆಸ್ಪೆಕ್ಟ್‌ ಮಾಡಿ. ಮದುವೆಯಾದ ತಕ್ಷಣ ಯಾರೂ ಯಾರ ಸ್ವತ್ತಲ್ಲ. ಒಂದೇ ಜೀವನ ನಡೆಸಲು ಇಬ್ಬರು ವ್ಯಕ್ತಿಗಳು ಇಷ್ಟಪಟ್ಟು ಜೊತೆಗಿದ್ದೀರಿ ಅಷ್ಟೆ.

ಜೀವನದ ಖುಷಿ ಪಡೆಯೋಕೆ ಫಾರೀನ್‌ ಟ್ರಿಪ್‌ ಹೋಗ್ಬೇಕಂತಿಲ್ಲ, ನಿತ್ಯದ ಸಣ್ಣ ಖುಷಿಗಳ ಬಗ್ಗೆ ಗಮನ ಇರಲಿ.

ಅವನು/ಅವಳ ಮೇಲೆ ನಂಬಿಕೆ ಇರಲಿ. ಆತ ಕೆಲಸಕ್ಕೆಂದು ಬೇರೆ ದೇಶಕ್ಕೇ ಹೋಗಲಿ. ನಿಮ್ಮ ನಂಬಿಕೆಯ ದಾರ ಅವರ ಕೈಯಲ್ಲಿ ಸದಾ ಇರಲಿ.

ಒಬ್ಬರನ್ನೊಬ್ಬರು ಗ್ರಾಂಟೆಂಡ್‌ ಆಗಿ ತೆಗೆದುಕೊಳ್ಳಬೇಡಿ. ಇದು ನಿಮ್ಮ ಸಂಬಂಧ ಕುಸಿದು ಬೀಳೋಕೆ ಮೊದಲ ಮೆಟ್ಟಿಲು.

ಅವನು ಕಾಫಿ ಕೊಟ್ಟರೆ ಥ್ಯಾಂಕ್ಸ್‌ ಹೇಳಿ, ಅವಳು ಬಟ್ಟೆ ಮಡಚಿಟ್ಟಾಗ ಥ್ಯಾಂಕ್ಸ್‌ ಹೇಳಿ. ಜೊತೆಗೆ ಕೆಲಸ ಮಾಡಿ, ಅಡುಗೆ ಮಾಡಿ ಸ್ನೇಹಿತರಂತೆ ಇರಿ.

ಕೆಲಸವನ್ನು ರೆಸ್ಪೆಕ್ಟ್‌ ಮಾಡಿ, ಒಬ್ಬರ ಪ್ರೊಫೆಷನ್‌ನ್ನು ಒಬ್ಬರು ಅಳೆಯಬೇಡಿ. ಇದು ನಿಮ್ಮ ಸಂಬಂಧ ಒಡೆದುಹೋಗೋದಕ್ಕೆ ಕಾರಣವಾಗಬಹುದು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!