ಹೊಸ ದಿಗಂತ ವರದಿ, ಮೈಸೂರು:
ಕಳೆದ ಕೆಲ ತಿಂಗಳ ಹಿಂದೆ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಲಲಿತಾದ್ರಿ ನಗರದ ಹೊರವಲಯದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ಮೈಸೂರು ಜಿಲ್ಲೆಯಲ್ಲಿ ವಿವಾಹಿತ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ನಡೆದಿದೆ.
ಜಿಲ್ಲೆಯ ನಂಜನಗೂಡು ತಾಲೂಕಿನ ತಗಡೂರು ಗ್ರಾಮದಲ್ಲಿ ಕುರಿ ಮೇಯಿಸುತ್ತಿದ್ದ ಮಹಿಳೆ ಮೇಲೆ ಮೂವರು ದುಷ್ಕರ್ಮಿಗಳು ಅತ್ಯಾಚಾರವೆಸಗಿದ್ದಾರೆ. ಪ್ರಕರಣದ್ಕೆ ಸಂಬOಧಿಸಿದOತೆ ತಗಡೂರು ಗ್ರಾಮದ ರಾಜು ಬಂಧಿತ ಆರೋಪಿಯಾಗಿದ್ದು, ಉಳಿದಿಬ್ಬರು ಆರೋಪಿಗಳಾದ ಪುಟ್ಟಣ್ಣ ಹಾಗೂ ರವಿ.ಆ.ಪೋಕ್ಲೇನ್ ನಾಪತ್ತೆಯಾಗಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಏಪ್ರಿಲ್ 11 ರಂದು 35 ವರ್ಷದ ಸಂತ್ರಸ್ಥ ಮಹಿಳೆ ಆರೋಪಿ ರಾಜು ಜಮೀನಿನ ಬಳಿ ಕುರಿ ಮೇಯಿಸುತ್ತಿದ್ದಳು. ಈ ವೇಳೆ ಪ್ರತ್ಯಕ್ಷನಾದ ರಾಜು ಸಂತ್ರಸ್ಥೆಯನ್ನ ದೈಹಿಕ ಸಂಪರ್ಕಕ್ಕಾಗಿ ಪುಸಲಾಯಿಸಿದ್ದಾನೆ.ನಿರಾಕರಿಸಿದ ಆಕೆಯನ್ನ ಬಲವಂತವಾಗಿ ಎಳೆದಾಡಿದ್ದಾನೆ. ಇದಕ್ಕೆ ಪ್ರತಿರೋಧಿಸಿದ್ದಾಳೆ.ಈ ವೇಳೆ ಪುಟ್ಟಣ್ಣ ಹಾಗೂ ರವಿಯನ್ನ ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಮೂವರೂ ಸೇರಿ ಮಹಿಳೆಯನ್ನ ಬಲವಂತವಾಗಿ ಪೊದೆಯೊಳಗೆ ಎಳೆದೊಯ್ದು ಅತ್ಯಾಚಾರ ಮಾಡಿದ್ದಾರೆ.ತೀವ್ರ ಅಸ್ವಸ್ಥಗೊಂಡ ಮಹಿಳೆ ಸ್ಥಳದಲ್ಲೇ ಬಿದ್ದಿದ್ದಾರೆ. ಕುರಿಗಳು ಮಾತ್ರ ಮನೆ ಸೇರಿಕೊಂಡಿವೆ.
ಪತ್ನಿ ಹಿಂದಿರುಗದ ಹಿನ್ನಲೆಯಲ್ಲಿ ಪತಿ ಕುರಿ ಮೇಯಿಸುತ್ತಿದ್ದ ಸ್ಥಳಕ್ಕೆ ತೆರಳಿದಾಗ ಅಸ್ವಸ್ಥಳಾಗಿ ಕಂಡು ಬಂದಿದ್ದಾರೆ.ಕೂಡಲೇ ಸಂತ್ರಸ್ಥೆಯನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಅತ್ಯಾಚಾರ ನಡೆದ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ ಮಹಿಳೆ ಎರಡು ದಿನಗಳ ನಂತರ ವಿಚಾರ ಹೇಳಿದ್ದಾರೆ. ದೊಡ್ಡಕವಲಂದೆ ಠಾಣೆ ಸಬ್ ಇನ್ಸೆ÷್ಪಕ್ಟರ್ ಮಹೇಂದ್ರ ಪ್ರಕರಣ ದಾಖಲಿಸಿಕೊಂಡು ಆರೋಪಿ ರಾಜುವನ್ನ ವಶಕ್ಕೆ ಪಡೆದಿದ್ದಾರೆ. ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.