ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಸಿನಿಮಾ ತಾರೆಯರು ಯಾರನ್ನು ಬೇಕಾದರೂ ಪ್ರೀತಿಸಬಹುದು, ಯಾರನ್ನಾದರೂ ಮದುವೆಯಾಗಬಹುದು ಎಂದು ಬಹಳ ಮಂದಿ ಅಂದುಕೊಂಡಿದ್ದಾರೆ.
ಈ ತಪ್ಪುತಿಳಿವಳಿಕೆ ಬಗ್ಗೆ ತಾಪ್ಸಿ ಪನ್ನು ಮಾತನಾಡಿದ್ದಾರೆ. ತಾನು ಮದುವೆಯಾಗುವ ಹುಡುಗ ಹೇಗಿರಬೇಕು ಎನ್ನುವಾಗ, ‘ಮನೆಯಲ್ಲಿ ಒಪ್ಪಿದ ಹುಡುಗನನ್ನೇ ಮದುವೆ ಆಗುತ್ತೇನೆ ‘ಎಂದು ಹೇಳಿದ್ದಾರೆ.
‘ಮನೆಯವರು ಒಪ್ಪದ ಹುಡುಗನನ್ನು ಖಂಡಿತ ಮದುವೆಯಾಗೋದಿಲ್ಲ, ಮದುವೆಯಾಗದ ಹುಡುಗನನ್ನು ಸುಮ್ಮನೆ ಡೇಟ್ ಮಾಡೋಕೆ ಹೋಗೋದಿಲ್ಲ. ಯಾರನ್ನು ಪ್ರೀತಿಸುತ್ತೇವೋ ಅವರನ್ನೇ ಮದುವೆ ಆಗಬೇಕು ಎಂದು ತಾಪ್ಸಿ ಹೇಳಿದ್ದಾರೆ. ಮದುವೆ ಮಾಡಿಕೊಳ್ಳೋ ಹುಡುಗನ ಮೇಲೆ, ಟೈಮ್ ಮತ್ತು ಶಕ್ತಿ ವ್ಯಯಿಸುತ್ತೀನಿ. ಇನ್ಯಾರ ಮೇಲೂ ಟೈಮ್ ವೇಸ್ಟ್ ಮಾಡೋಕೆ ಇಷ್ಟ ಇಲ್ಲ. ಟೈಮ್ ಪಾಸ್ ಲವ್ ಇಂಟ್ರೆಸ್ಟ್ ಇಲ್ಲ’ ಎಂದು ತಾಪ್ಸಿ ಹೇಳಿದ್ದಾರೆ. ಒಟ್ಟಾರೆ ತಾಪ್ಸಿ ಅಪ್ಪ ಅಮ್ಮನನ್ನು ಒಪ್ಪಿಸಿದರೆ ತಾಪ್ಸಿ ಮದುವೆಯಾಗೋದು ಗ್ಯಾರೆಂಟಿ ಅಂತಾಯ್ತು!