ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಕೊರೋನಾ ಎರಡು ಅಲೆಗಳ ಬಳಿಕ ಇದೀಗ ಸೋಂಕು ನಿಯಂತ್ರಿಸಲು ದೇಶ ಸನ್ನದ್ಧವಾಗಿದೆ ಜೊತೆಗೆ 2022ರ ಡೆಸೆಂಬರ್ ವರೆಗೂ ಮಾಸ್ಕ್ ಧರಿಸಬೇಕಾಗಬಹುದು ಎಂದು ಮಹಾರಾಷ್ಟ್ರದ ಕೋವಿಡ್ ಟಾಸ್ಕ್ ಫೋರ್ಸ್ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಸುದ್ದಿ ಮಾಧ್ಯಮಕ್ಕೆ ಡಾ. ರಾಹುಲ್ ಪಂಡಿತ್ ಹಾಗೂ ಡಾ. ಶಶಾಂಕ್ ಜೋಶಿ ಮಾಹಿತಿ ನೀಡಿದ್ದಾರೆ.
ಕೊರೋನಾ ಮೂರನೇ ಅಲೆಯಲ್ಲಿ ಕೋವಿಡ್ ಸಾವುಗಳ ಸಂಖ್ಯೆಯನ್ನು ಶೂನ್ಯಕ್ಕೆ ತರಲು ಶ್ರಮಿಸಬೇಕು. ಈಗಾಗಲೇ ಪ್ರತಿ ಅಲೆಯ ನಡುವೆಯು 100ರಿಂದ 120 ದಿನಗಳ ಅಂತರವಿದ್ದು, ಮೂರನೇ ಅಲೆಗೂ ಮುನ್ನ ಈ ಅಂತರವನ್ನು ಮತ್ತಷ್ಟು ಹೆಚ್ಚಿಸಬೇಕು ಎಂದರು.
ಕೋವಿಡ್ ತಡೆಯಲು ನಾವು ಮುಂದಿನ ದಿನಗಳಲ್ಲಿ ಜನದಟ್ಟನೆಯನ್ನು ನಿಯಂತ್ರಿಸಬೇಕು. ಮುಂದಿನ ವರ್ಷ ಡಿಸೆಂಬರ್ ವರೆಗೂ ಮಾಸ್ಕ್ ಬಳಸುವುದು ಪ್ರಮುಖವಾಗಲಿದೆ.
ಇತ್ತೀಚಿಗೆ ಕೊರೋನಾ ಆರ್ಟಿಪಿಸಿಆರ್ ಪರೀಕ್ಷೆಯ ಅವಧಿಯೂ ಕಡಿಮೆಯಾಗಿದ್ದು, ತ್ವರಿತ ಮಾಹಿತಿ ಪಡೆಯಬಹುದಾಗಿದೆ. ಈ ವೇಳೆ ನಮ್ಮ ವೈಯಕ್ತಿಕ ಕಾಳಜಿ ಮಾತ್ರವಲ್ಲದೆ ಸಾರ್ವಜನಿಕರ ಆರೈಕೆಯೂ ಮಾಡಬೇಕು ಎಂದರು.