Wednesday, November 30, 2022

Latest Posts

ವಿಮಾನ ಪ್ರಯಾಣದ ಸಮಯದಲ್ಲಿ ಇನ್ಮುಂದೆ ಮಾಸ್ಕ್ ಕಡ್ಡಾಯವಲ್ಲ: ಕೇಂದ್ರ ಸರ್ಕಾರ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ದೇಶದಲ್ಲಿ ಕೊರೋನಾ ಪ್ರಮಾಣ ಕಡಿಮೆವಿದ್ದರೂ ಮಸ್ಕ್ ಬಳಕೆ ಕಡ್ಡಾಯವಾಗಿದ್ದು, ಆದರೆ ವಿಮಾನ ಪ್ರಯಾಣದ ಸಮಯದಲ್ಲಿ ಮಾಸ್ಕ್ ಬಳಕೆ ಕಡ್ಡಾಯವಲ್ಲ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಇಂದು ಹೇಳಿದೆ.

ಇಲ್ಲಿಯವರೆಗೆ ವಿಮಾನಗಳಲ್ಲಿ ಪ್ರಯಾಣಿಸುವಾಗ ಮಾಸ್ಕ್ ಅಥವಾ ಫೇಸ್ ಕವರ್ ಬಳಸುವುದು ಕಡ್ಡಾಯವಾಗಿತ್ತು.

ಇದೀಗ ಕೋವಿಡ್ -19 ನಿರ್ವಹಣಾ ಪ್ರತಿಕ್ರಿಯೆಗೆ ಶ್ರೇಣೀಕೃತ ವಿಧಾನದ ಸರ್ಕಾರದ ನೀತಿಗೆ ಅನುಗುಣವಾಗಿ ನಿರ್ಧಾರವನ್ನ ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯವು ವಿಮಾನಯಾನ ಸಂಸ್ಥೆಗಳಿಗೆ ನೀಡಿದ ಪತ್ರದಲ್ಲಿ ತಿಳಿಸಿದೆ. ದಂಡದ ಕ್ರಮದ ಯಾವುದೇ ನಿರ್ದಿಷ್ಟ ಉಲ್ಲೇಖವನ್ನು ಘೋಷಿಸಬೇಕಾಗಿಲ್ಲ ಎಂದು ಅದು ಹೇಳಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!