ಬಿಗ್‌ ಬಿಲಿಯನ್‌ ಡೇ ಮಾರಾಟದಲ್ಲಿ ಭಾರಿ ರದ್ದತಿ: ಟ್ವೀಟರ್‌ ನಲ್ಲಿ ಪ್ಲಿಪ್‌ಕಾರ್ಟ್‌ಗೆ ಬೆಂಡೆತ್ತುತ್ತಿದ್ದಾರೆ ಗ್ರಾಹಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹಬ್ಬದ ಋತುವಿನಲ್ಲಿ ಜನರ ಖರೀದಿ ಜೋರಾಗಿಯೇ ನಡೆಯುತ್ತಿದೆ. ಫ್ಲಿಪ್‌ಕಾರ್ಟ್‌ ಸೇರಿದಂತೆ ಇತರ ಇ-ಕಾಮರ್ಸ್‌ ಮಾರುಕಟ್ಟೆಗಳಲ್ಲಿ ಆಫರ್‌ ಬಾಚಿಕೊಳ್ಳಲು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡುತ್ತಿದ್ದಾರೆ. ಹೊಸ ಬಟ್ಟೆಯಿಂದ ಹಿಡಿದು ದೀಪಾವಳಿ ಉಡುಗೊರೆಗಳವರೆಗೆ ಜನರು ಎಲ್ಲವನ್ನೂ ಖರೀದಿಸುತ್ತಿದ್ದಾರೆ.

ಜನರ ಖರೀದಿಯನ್ನು ಹೆಚ್ಚಿಸಲು ಇ-ಕಾಮರ್ಸ್‌ ಕಂಪನಿಗಳು ದೊಡ್ಡ ದೊಡ್ಡ ಪ್ರಮಾಣದಲ್ಲಿ ರಿಯಾಯಿತಿಗಳನ್ನು ಘೋಷಿಸುತ್ತವೆ. ಆದರೆ ಈ ಬಾರಿ ತನ್ನ ಬಿಗ್‌ ಬಿಲಿಯನ್‌ ಡೇ ಸಮಯದಲ್ಲಿ ಎಲ್ಲರ ಬೇಡಿಕೆಗಳನ್ನು ಪೂರೈಸಲು ಕಂಪನಿಯು ವಿಫಲವಾಗಿದೆ. ಆರ್ಡರ್‌ ಪ್ಲೇಸ್‌ ಮಾಡಿದ ನಂತರ ಹಲವು ಆರ್ಡರ್‌ ಗಳು ರದ್ದಾಗುತ್ತಿವೆ. ಇದರಿಂದ ಬೇಸತ್ತ ಗ್ರಾಹಕರು ಟ್ವೀಟರ್‌ ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಫ್ಲಿಪ್‌ ಕಾರ್ಟ್‌ಅನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ದೂರುಗಳಿಂದ ತುಂಬಿವೆ, ಅಲ್ಲಿ ಹಲವಾರು ಗ್ರಾಹಕರು ತಮ್ಮ ಆದೇಶವನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಟ್ರೋಲ್‌ ಗಳು, ಮೀಮ್‌ ಗಳ ಮುಖಾಂತರ ಜನರು ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!