Wednesday, August 10, 2022

Latest Posts

ಅ.10ಕ್ಕೆ ಆರ್ಯ ಈಡಿಗ ಸಮುದಾಯದಿಂದ ಬೃಹತ್ ಜಿಲ್ಲಾ ಸಮಾವೇಶ: ಪ್ರಣವಾನಂದ ಸ್ವಾಮೀಜಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ ಹಾವೇರಿ:

ಆರ್ಯ ಈಡಿಗ ಸಮುದಾಯದ ಕೆಲ ಬೇಡಿಕೆಗಳನ್ನು ಇಡೇರಿಸುವಂತೆ ಆಗ್ರಹಿಸಿ ಅಕ್ಟೋಬರ್ 10 ರಂದು ಹವೇರಿಯಲ್ಲಿ ಬೃಹತ್ ಜಿಲ್ಲಾ ಸಮಾವೇಶವನ್ನು ಆಯೋಜನೆ ಮಾಡಲಾಗುವುದು ಎಂದು ಪ್ರಣವಾನಂದ ಸ್ವಾಮೀಜಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಾವೇಶದಲ್ಲಿ ಅಂದಾಜು 10 ಸಾವಿರ ಸಮುದಾಯದ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ಸಮುದಾಯದ ಕುಮರ ಬಂಗಾರಪ್ಪ, ಮಧು ಬಂಗಾರಪ್ಪ, ಶಾಸಕರು ಹಾಗೂ ಗಣ್ಯರನ್ನು ಆಹ್ವಾನಿಸಲಾಗುವುದು. ಈ ಸಮುದಾಯಕ್ಕೆ ಸಂಬಂಧಿಸಿದ ನಿಗಮಮಂಡಳಿ ಸ್ಥಾಪನೆ ಸೇರಿದಂತೆ ರಾಜ್ಯದಲ್ಲಿ ರಾಜಕೀಯವಾಗಿ ಪ್ರಾತಿನಿಧ್ಯ ನೀಡಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸುವದಾಗಿ ತಿಳಿಸಿದರು.
ಈಡಿಗ ಸಮುದಾಯದ ಕುಲ ಕಸುಬಾದ ಸೇಂದಿ ಇಳಿಸುವುದನ್ನು ನಾನಾ ರಾಜಾಕೀಯ ಕಾರಣಗಳಿಂದ ಸ್ಥಗಿತಗೊಳಿಸಿದ ನಂತರ ಈ ಸಮುದಾಯಕ್ಕೆ ಪರ್ಯಾಯ ವ್ಯಸ್ಥೆಯನ್ನು ಇಂದಿನವರೆಗೂ ಯಾವುದೇ ಸರ್ಕಾರಗಳು ಮಾಡದಿರುವುದರಿಂದ ಆರ್ಯ ಈಡಿಗ ಸಮುದಾಯ ಆರ್ಥಿಕವಾಗಿ ಸಂಕಷ್ಟವನ್ನು ಎದುರಿಸುವಂತಾಗಿದೆ ಎಂದರು.
ಈಚಲ ಮರಗಳಿಂದ ಸೇಂದಿ ಇಳಿಸುವುದನ್ನು ಸ್ಥಗಿತಗೊಳಿಸಿದ ಕೆಲ ರಾಜ್ಯಗಳಲ್ಲಿ ಈ ಕಸುಬನ್ನು ನೆಚ್ಚಿಕೊಂಡಿದ್ದ ಕುಟುಂಬದ ಓರ್ವ ಸದಸ್ಯರಿಗೆ ಇಂದಿನವರೆಗೂ ಮಾಶಾಸನವನ್ನು ನೀಡುತ್ತಿವೆ ಹಾಗೂ ಪರ್ಯಾಯ ಉದ್ಯೋಗವನ್ನು ಕಲ್ಪಿಸಿಕೊಟ್ಟಿವೆ ಅದೇ ರೀತಿ ಕರ್ನಾಟಕದಲ್ಲಿಯೂ ಜಾರಿಗೊಳಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.
ಈಡಿಗ ಸಮುದಾಯದ ಕುಲ ಕಸುಬಾದ ಸೇಂದಿ ಇಳಿಸುವುದು ಸ್ಥಗಿತಗೊಳಿಸಿರುವುದರಿಂದ ಈ ಸಮುದಾಯಕ್ಕೆ ಎಂಎಸ್‌ಐಎಲ್‌ನ ಮದ್ಯದಂಗಡಿಗಳಲ್ಲಿ ಶೇ.೫೦ ಮೀಸಲಿಡಬೇಕು ಹಾಗೂ ಈ ಮೊದಲು ಈಚಲ ಮರಗಳಿರುವ ಜಾಗೆಗಳನ್ನು ಇದೇ ಸಮುದಾಯದ ಜನತೆಗೆ ನೀಡಬೇಕು ಇದರಿಂದ ಈ ಸಮುದಾಯದ ಜನತೆ ಜೀವನೋಪಾಯ ಕಂಡುಕೊಳ್ಳುವುದಕ್ಕೆ ಸಹಕಾರಿಯಾಗಲಿದೆ ಎಂದರು.
ಆರ್ಯ ಈಡಿಗ ಸಮುದಾಯವನ್ನು ರಾಜಕೀಯವಾಗಿ ಪರಿಗಣಿಸದಿದ್ದರೆ ಬರುವ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠವನ್ನು ಕಲಿಸಲಾಗುವುದು ಎಂದು ತಿಳಿಸಿದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss