ಇಂಡೋನೇಷ್ಯಾದಲ್ಲಿ ಭಾರೀ ಭೂಕಂಪ: ರಿಕ್ಟರ್ ಮಾಪಕದಲ್ಲಿ 6.1ತೀವ್ರತೆ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂಡೋನೇಷ್ಯಾದಲ್ಲಿ ಸರಣಿ ಭೂಕಂಪಗಳು ಸಂಭವಿಸುತ್ತಿವೆ. ಅಲ್ಲಿನ ಕೆಪುಲುನ್ ಬಟು ಭಾನುವಾರ ಬೆಳಗ್ಗೆ ಸತತ ಎರಡು ಬಾರಿ ಭೂಕಂಪನಕ್ಕೆ ಒಳಗಾಗಿದೆ. ಮೊದಲ ಬಾರಿಗೆ ಭೂಕಂಪದ ತೀವ್ರತೆ 6.1 ಆಗಿತ್ತು ಎಂದು ಯುರೋಪಿಯನ್ ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್ (EMSC) ವರದಿ ಮಾಡಿದೆ. ಮತ್ತೆ ಕೆಲವೇ ಗಂಟೆಗಳಲ್ಲಿ 5.8ರಷ್ಟು ತೀವ್ರತೆಯೊಂದಿಗೆ ಭೂಮಿ ಮತ್ತೆ ಕಂಪಿಸಿದೆ.

ಮೊದಲ ಬಾರಿಗೆ ಭೂಮಿಯ ಒಳಭಾಗದಲ್ಲಿ 43 ಕಿಲೋಮೀಟರ್ ಆಳದಲ್ಲಿ ಕಂಪನಗಳು ಸಂಭವಿಸಿವೆ. ಎರಡನೇ ಕಂಪನವು 40 ಕಿ.ಮೀ ಆಳದಲ್ಲಿ ಸಂಭವಿಸಿದೆ ಎಂದು EMSC ಹೇಳಿದೆ. ಈ ತಿಂಗಳ 3 ರಂದು ಸುಮಾತ್ರಾ ದ್ವೀಪಗಳಲ್ಲಿಯೂ ಭೂಕಂಪ ಸಂಭವಿಸಿದೆ. 6.1 ತೀವ್ರತೆ ದಾಖಲಾಗಿದ್ದರಿಂದ ಜನರು ಭಯಭೀತರಾಗಿದ್ದರು.

ಈ ವರ್ಷದ ಜನವರಿ 9 ರಂದು ಇಂಡೋನೇಷ್ಯಾದ ತನಿಂಬಾಲ್ ಪ್ರದೇಶದಲ್ಲಿ ಭಾರೀ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 7.7ರಷ್ಟು ತೀವ್ರತೆ ದಾಖಲಾಗಿದೆ. ಆ ಸಮಯದಲ್ಲಿ ಭೂಕಂಪದ ಕೇಂದ್ರವು ಭೂಮಿಯ ಮೇಲ್ಮೈಯಿಂದ 97 ಕಿಮೀ ಆಳದಲ್ಲಿದೆ. ಭೂಮಿ ಕಂಪಿಸಿದ ಕಾರಣ ಗಾಬರಿಗೊಂಡ ಜನರು ಮನೆಗಳಿಂದ ಓಡಿ ಬಂದರು. ಮೊದಲು ಭೂಕಂಪದ ಕಾರಣ ಸುನಾಮಿ ಎಚ್ಚರಿಕೆ ನೀಡಲಾಗಿತ್ತು. ಆದರೆ, ಮೂರು ಗಂಟೆಗಳ ನಂತರ ಯಾವುದೇ ಸೂಚನೆ ಇಲ್ಲದ ಕಾರಣ ಸರ್ಕಾರ ಸುನಾಮಿ ಎಚ್ಚರಿಕೆಯನ್ನು ಹಿಂಪಡೆದಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!