Sunday, June 26, 2022

Latest Posts

ಲುಧಿಯಾನಾ ಕೋರ್ಟ್ ಎರಡನೇ ಮಹಡಿಯಲ್ಲಿ ಭಾರೀ ಸ್ಫೋಟ: ಇಬ್ಬರು ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಜಾಬ್‌ನ ಲುಧಿಯಾನಾ ನಗರದ ನ್ಯಾಯಾಲಯವೊಂದರ ಸಂಕೀರ್ಣದಲ್ಲಿ ಸ್ಫೋಟ ಉಂಟಾಗಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೋರ್ಟ್‌ನ ಎರಡನೇ ಮಹಡಿಯಲ್ಲಿ ಆದ ಸ್ಫೋಟದ ತೀವ್ರತೆಗೆ ಕೆಳಗೆ ಪಾರ್ಕಿಂಗ್ ಸ್ಥಳವೂ ಧ್ವಂಸವಾಗಿದೆ.
ಎರಡನೇ ಮಹಡಿಯ ವಾಶ್‌ರೂಂನಲ್ಲಿ ಸ್ಫೋಟ ಉಂಟಾಗಿದ್ದು, ಸ್ಥಳಕ್ಕೆ ಪೊಲೀಸರು ತೆರಳಿದ್ದಾರೆ.
ಕೋರ್ಟ್ ಆವರಣದಲ್ಲಿ ಸ್ಫೋಟವಾಗಿರುವ ಕಾರಣ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಕಟ್ಟಡದಿಂದ ಹೊಗೆ ಬರುತ್ತಿರುವ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿದೆ. ಇದೊಂದು ಪ್ರಬಲ ಸ್ಫೋಟವಾಗಿದ್ದು, ಇಡೀ ಕಟ್ಟಡವೇ ನಲುಗಿದೆ ಎಂದು ಮಾಹಿತಿ ಒದಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss