ಕಸದ ಡಂಪಿಂಗ್‌ ಯಾರ್ಡ್‌ನಲ್ಲಿ ಅಗ್ನಿ ಅನಾಹುತ: ಓರ್ವ ವ್ಯಕ್ತಿ ಸಾವು, ಇಬ್ಬರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಿನ್ನೆ ತಡರಾತ್ರಿ ಗುರುಗ್ರಾಮ್ ಜಿಲ್ಲೆಯ ಮನೇಸರ್‌ನ ಕಸದ ಡಂಪಿಂಗ್‌ ಯಾರ್ಡ್‌ ಸೆಕ್ಟರ್-6 ರಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. 35 ಅಗ್ನಿಶಾಮಕ ದಳ ವಾಹನಗಳು ಸ್ಥಳದಲ್ಲಿ ಬೆಂಕಿ ನಂದಿಸುವ ಕಾರ್ಯ ಮಾಡಿವೆ.

ಡಂಪಿಂಗ್‌ ಯಾರ್ಡ್‌ ಪಕ್ಕದಲ್ಲೇ ವಾಸವಾಗಿದ್ದ ಅಲೆಮಾರಿ ಜನಾಂಗ ಅಡುಗೆ ಮಾಡುತ್ತಿದ್ದ ವೇಳೆ ಬೆಂಕಿ ಕಿಡಿ ಹೊತ್ತಿಕೊಂಡಿದೆ. ಗಾಳಿಯ ರಭಸಕ್ಕೆ ಅಲ್ಲಿದ್ದ ಗುಡಿಸಲುಗಳಿಗೂ ಸಹ ಬೆಂಕಿ ಬಿದ್ದಿದ್ದು, ನಂತರ ಅದು ಕಸದ ರಾಶಿಗೆ ವ್ಯಾಪಿಸಿದೆ ಎನ್ನಲಾಗುತ್ತಿದೆ.

25ರಿಂದ 30 ಎಕರೆ ಜಮೀನಿನಲ್ಲಿ ಡಂಪ್‌ ಮಾಡಲಾಗಿದ್ದ ಕಸದ ರಾಶಿ ಬೆಂಕಿಯ ಕೆನ್ನಾಲಿಗೆಗೆ ಧಗಧಗ ಹೊತ್ತಿ ಉರಿದಿದೆ. ದುರಂತದಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ ಇಬ್ಬರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ 90% ಬೆಂಕಿಯನ್ನು ನಂದಿಸಲಾಗಿದೆ, ಬೆಂಕಿ ಇದೀಗ ನಿಯಂತ್ರಣದಲ್ಲಿದೆ ಎಂದು ಅಗ್ನಿಶಾಮಕ ಅಧಿಕಾರಿ ರಮೇಶ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!