ಬಿಹಾರದ ದೇವಾಲಯದಲ್ಲಿ ಭಾರೀ ಕಾಲ್ತುಳಿತ: ಎಂಟು ಭಕ್ತರ ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬಿಹಾರದ ನಳಂದ ಜಿಲ್ಲೆಯ ಶಿಟ್ಲಾ ಮಾತಾ ಮಂದಿರ ದೇವಾಲಯದಲ್ಲಿ ಕಾಲ್ತುಳಿತ ಉಂಟಾಗಿದ್ದು, ಎಂಟು ಮಹಿಳಾ ಭಕ್ತರು ಕೊನೆಯುಸಿರೆಳೆದಿದ್ದಾರೆ. ನಳಂದ ಜಿಲ್ಲೆಯ ಬಿಹಾರ ಶರೀಫ್‌ನಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿರುವ ಮಾಘ್ರಾ ಗ್ರಾಮದಲ್ಲಿರುವ ಶೀತ್ಲಾಷ್ಟಮಿ ದೇವಾಲಯದಲ್ಲಿ ಕಾಲ್ತುಳಿತ ಸಂಭವಿಸಿದೆ. ಇಂದು ಚೈತ್ರ ಮಾಸದ ಕೊನೆಯ ಮಂಗಳವಾರವಾದ್ದರಿಂದ, ದೇವಾಲಯದಲ್ಲಿ ಅಪಾರ ಸಂಖ್ಯೆಯ ಭಕ್ತರು ಜಮಾಯಿಸಿದ್ದರು. ಇನ್ನೂ ಹಲವು ಭಕ್ತರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.