spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಗೆಸ್ಟ್​​ಹೌಸ್ ಅತಿಕ್ರಮ ಪ್ರವೇಶ: ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಶಾಸಕ ಜಮೀರ್ ಅಹ್ಮದ್ ದೂರು!

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ನಿಖಿಲ್​ ಕುಮಾರಸ್ವಾಮಿ ಬೆಂಬಲಿಗರು ಮತ್ತು ಮಾಜಿ ಸಚಿವ ಜಮೀರ್​ ಅಹ್ಮದ್ ಬೆಂಬಲಿಗರ ನಡುವೆ ಸದಾಶಿವನಗರ ಗೆಸ್ಟ್ ಹೌಸ್ ಬಳಿ ಗಲಾಟೆ ನಡೆದಿದೆ.
ಸದಾಶಿವನಗರ ಗೆಸ್ಟ್ ಹೌಸ್ ಬಳಿ ನಿಖಿಲ್​ ಕುಮಾರಸ್ವಾಮಿ ಬೆಂಬಲಿಗರು ತೆರಳಿದ್ದರು. ಇದೇ ವೇಳೆ ಜಮೀರ್ ಬೆಂಬಲಿಗರು ಕೂಡ ಗೆಸ್ಟ್ ಹೌಸ್ ಬಳಿ ಜಮಾವಣೆಗೊಂಡಿದ್ದರು. ಈ ವೇಳೆ ಇಬ್ಬರ ಬೆಂಬಲಿಗರ ನಡುವೆ ಮಾತಿನ ಚಕಮಕಿ ಉಂಟಾಗಿ ಗಲಾಟೆ ನಡೆದಿದೆ.
ಗೆಸ್ಟ್ ಹೌಸ್ ವಿಚಾರಕ್ಕೆ ಗಲಾಟೆ ನಡೆದಿದ್ದು, . ಗೆಸ್ಟ್​ಹೌಸ್ ಬಳಿ ತೆರಳಿದ ನಿಖಿಲ್ ಕುಮಾರಸ್ವಾಮಿಯ ಮೂವರು ಬಾಡಿ ಗಾರ್ಡ್​ಗಳು ಗೆಸ್ಟ್ ಹೌಸ್ ನಮ್ಮದು ಎಂದು ಕೇರ್​ಟೇಕರ್​ನನ್ನು ಓಡಿಸಿದ್ದಾರೆ ಅನ್ನೋ ಆರೋಪ‌ ಕೇಳಿಬಂದಿದೆ. ಆದರೆ, ಗೆಸ್ಟ್ ಹೌಸ್ ನಮ್ಮದು ಅಂತಾ ಜಮೀರ್​ ಪಿಎ ಫಾರೂಕ್​ ಠಾಣೆಗೆ ದೌಡಾಯಿಸಿದ್ದಾರೆ.
ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ದೂರು ನೀಡಿದ್ದಾರೆ.ಆಪ್ತ ಸಹಾಯಕ ಫಾರೂಕ್ ಮೂಲಕ ಬೆಂಗಳೂರಿನ ಸದಾಶಿವ ನಗರ ಪೊಲೀಸ್​ ಠಾಣೆಗೆ ದೂರು ಸಲ್ಲಿಸಿಕೆ ಮಾಡಿದ್ದಾರೆ. ಸದಾಶಿವ ನಗರದ ಗೆಸ್ಟ್​​ಹೌಸ್ ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂದು ದೂರು ಸಲ್ಲಿಸಲಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss