ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ದಿಗಂತ ವರದಿ ಕಲಬುರಗಿ:
ಅತೀ ಕುತೂಹಲದಿಂದ ಕೂಡಿದ ಕಲಬುರಗಿ ಮಹಾ ನಗರ ಪಾಲಿಕೆಯ ಚುನಾವಣೆ, ಯ ಮತ ಎಣಿಕೆ ಪ್ರಕ್ರಿಯೆ, ಪ್ರಾರಂಭವಾಗುತ್ತಿದ್ದು, ಅಭ್ಯರ್ಥಿ ಗಳ ಸಮ್ಮುಖದಲ್ಲಿ ಪಾಲಿಕೆ ಚುನಾವಣೆ ಸ್ಟ್ರಾಂಗ್ ರೂಂಗಳನ್ನು ತೆರೆಯಲಾಯಿತು.
ನಗರದ ಎನ್.ವಿ. ಕಾಲೇಜಿನ ಕೌಂಟಿಂಗ ಕೇಂದ್ರದಲ್ಲಿ ಮತಗಳ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಎಪಿಎಂಸಿ ಕಾಯ೯ದಶಿ೯ ಶೈಲಜಾ, ಕೆಯುಡಿಎ ಆಯುಕ್ತ ರಾಚಪ್ಪಾ, ಸಾವ೯ಜನಿಕ ಶಿಕ್ಷಣ ಇಲಾಖೆ ಉಪ ನಿದೇ೯ಶಕ ಅಶೋಕ ಭಜಂತ್ರಿ ಅವರು ಸ್ಟ್ರಾಂಗ್ ರೂಮ್ ಓಪನ್ ಮಾಡಿದರು.
ಮತಪೆಟ್ಟಿಗೆಯಲ್ಲಿ ಅಭ್ಯರ್ಥಿ ಗಳ ಭವಿಷ್ಯ ಅಡಗಿದ್ದು, ಮಧ್ಯಾಹ್ನ ದವರೆಗೆ ಅಂತಿಮ ಫಲಿತಾಂಶ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಲಬುರಗಿ ಮಹಾ ನಗರ ಪಾಲಿಕೆಯ ಚುನಾವಣೆಯ ಈ 55 ವಾಡ೯ಗಳಲ್ಲಿ ಒಟ್ಟು 2,60,352 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.