ಮಥುರಾ, ವೃಂದಾವನವನ್ನೂ ಮರುಸ್ಥಾಪನೆ ಮಾಡುತ್ತೇವೆ: ಸಿಎಂ ಯೋಗಿ ಆದಿತ್ಯನಾಥ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ನಂತರ ಮಥುರಾ, ವೃಂದಾವನ, ವಿಂಧ್ಯವಾಸಿನಿ ಧಾಮ, ನೈಮಿಷಾರಣ್ಯ ಧಾಮಗಳಂತಹ ಮಂದಿರಗಳು ಕೂಡ ತಲೆ ಎತ್ತಲಿವೆ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಭಾನುವಾರ ಲಕ್ನೋದಲ್ಲಿ ನಡೆದ ಯುಪಿ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಹೇಳಿಕೆ ನೀಡಿದ್ದಾರೆ. ಗ್ಯಾನವಾಪಿ ಮಸೀದಿ ವಿವಾದದಲ್ಲಿ ಕಾನೂನು ಕ್ರಮ ಕೈಗೊಳ್ಳುತ್ತಿರುವ ಸಂದರ್ಭದಲ್ಲೇ ಅವರಿಂದ ಈ ಹೇಳಿಕೆ ಹೊರಬಿದ್ದಿದೆ. ಇತ್ತೀಚೆಗೆ ನವೀಕರಿಸಿದ ಕಾಶಿ ವಿಶ್ವನಾಥ ದೇವಾಲಯವು ಪ್ರತಿದಿನ ಸುಮಾರು ಒಂದು ಲಕ್ಷ ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಎಂದು ಯೋಗಿ ಹೇಳಿದರು. ಪ್ರಧಾನಿ ಮೋದಿಯವರ ದೂರದೃಷ್ಟಿಗೆ ಅನುಗುಣವಾಗಿ ನಗರವು ತನ್ನ ಹೆಸರಿನ ಮಹತ್ವವನ್ನು ಸಾಬೀತುಪಡಿಸುತ್ತಿದೆ. ಯುಪಿಯಲ್ಲಿ ಬಿಜೆಪಿ ಆಡಳಿತದ ಅವಧಿಯಲ್ಲಿ ಒಂದೇ ಒಂದು ಧಾರ್ಮಿಕ ಹಿಂಸಾಚಾರ ನಡೆದಿಲ್ಲ, ಇದು ರಾಜ್ಯದಲ್ಲಿನ ಬಲವಾದ ಭದ್ರತಾ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಯೋಗಿ ಆದಿತ್ಯಾನಾಥ್ ಹೇಳಿದರು.

ಈದ್‌ಗೆ ಮುನ್ನ ಕಳೆದ ಶುಕ್ರವಾರ ರಸ್ತೆಗಳಲ್ಲಿ ಪ್ರಾರ್ಥನೆ ನಡೆಯದಿರುವುದು ಇದೇ ಮೊದಲು ಎಂದರು.. ಇದೇ ವೇಳೆ ಶ್ರೀರಾಮನವಮಿ ಹನುಮ ಜಯಂತಿಯನ್ನು ಶಾಂತಿಯುತವಾಗಿ ಆಚರಿಸಲಾಗಿದೆ. ಪ್ರಾರ್ಥನಾ ಸ್ಥಳಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕಿರುವುದನ್ನು ಉಲ್ಲೇಖಿಸಿದ ಅವರು, “ಅನಗತ್ಯವಾಗಿ ಶಬ್ದ ಉಂಟುಮಾಡುತ್ತಿದ್ದ ಧ್ವನಿವರ್ಧಕಗಳನ್ನು ನಮ್ಮ ಸರ್ಕಾರ ಹೇಗೆ ತೆಗೆದುಹಾಕಿದೆ ಎಂಬುದನ್ನು ಜನರು ಗಮನಿಸುತ್ತಿದ್ದಾರೆ”. 2024ರ ಲೋಕಸಭೆ ಚುನಾವಣೆಗೆ ತಕ್ಷಣವೇ ಪ್ರಚಾರ ಆರಂಭಿಸುವ ಅಗತ್ಯವನ್ನು ಒತ್ತಿ ಹೇಳಿದ ಯೋಗಿ, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ 80 ಲೋಕಸಭಾ ಸ್ಥಾನಗಳ ಪೈಕಿ ಕನಿಷ್ಠ 75 ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಪಕ್ಷ ಮುನ್ನಡೆಯಬೇಕು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!