ವೈರಲ್‌ ವೀಡಿಯೋ| ಸಂಪ್ರದಾಯ ಎಂದು ಮೊಸಳೆಯನ್ನೇ ಮದುವೆಯಾದ ಮೇಯರ್‌ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇಂದಿನ ಇಂಟರ್‌ ನೆಟ್‌ ಜಮಾನಾದಲ್ಲಿ ಚಿತ್ರ ವಿಚಿತ್ರ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಅಂಥಹುದೇ ವೀಡಿಯೋವೊಂದು ಇತ್ತೀಚೆಗೆ ವೈರಲ್‌ ಆಗಿದೆ. ಶತಮಾನಗಳ ಹಿಂದಿನ ಊರಿನ ಸಂಪ್ರದಾಯದಂತೆ ಮೇಯರ್‌ ಒಬ್ಬ ಮೊಸಳೆಯೊಂದಿಗೆ ವಿವಾಹವಾದ ವಿಡಿಯೋವೊಂದು ಅಂತರ್ಜಾಲದಲ್ಲಿ ಹರಿದಾಡುತ್ತಿದೆ.

ಮೆಕ್ಸಿಕೋದ ಸ್ಯಾನ್ ಪೆಡ್ರೊ ಹ್ಯೂಮೆಲುಲಾ ಎಂಬ ಪುಟ್ಟ ಹಳ್ಳಿಯೊಂದರ ಮೇಯರ್ ವಿಕ್ಟರ್ ಹ್ಯೂಗೋ ಸೋಸಾ ಎಂಬಾತ ಏಳುವರ್ಷದ ಮೊಸಳೆಯೊಂದಿಗೆ ವಿವಾಹವಾಗಿದ್ದಾನೆ. ಇದು ಅಲ್ಲಿನ ಒಕ್ಸಾಕಾ ರಾಜ್ಯದ ಚೊಂಟಾಲ್ ಮತ್ತು ಹುವಾವ್ ಎಂಬ ಸ್ಥಳೀಯ ಸಮುದಾಯಗಳಲ್ಲಿ ಮುಂಚಿನಿಂದಲೂ ನಡೆದುಕೊಂಡು ಬಂದ ಆಚರಣೆಯಾಗಿದೆ. ಪೂರ್ವ ಹಿಸ್ಪಾನಿಕ್‌ (ಸ್ಪಾನಿಶ್‌ ಆಕ್ರಮಣಕ್ಕೂ ಮುಂಚಿನ) ಕಾಲದ ಆಚರಣೆ ಇದಾಗಿದ್ದು ಪ್ರಕೃತಿಯ ಅನುಗ್ರಹ ಪಡೆಯಲು ಈ ಆಚರಣೆ ರೂಢಿಯಲ್ಲಿದೆ. ಜೀವನಕ್ಕೆ ಅಗತ್ಯವಿರುವಷ್ಟು ಮಳೆಗಾಗಿ ಹಾಗೂ ಆಹಾರಕ್ಕಾಗಿ ನದಿಯಲ್ಲಿ ಹೆಚ್ಚಿನ ಪ್ರಮಾನದ ಮೀನುಗಳ ಸೃಷ್ಟಿಗಾಗಿ ನಾವು ಪ್ರಾರ್ಥಿಸಲು ಈ ಆಚರಣೆ ಮಾಡುತ್ತೇವೆ ಎನ್ನುತ್ತಾರೆ ಸೋಸಾ.

ಏಳುವರ್ಷದ ಮೊಸಳೆಗೆ ವಧುವಿನಂತೆ ಬಿಳಿಬಣ್ಣದ ಬಟ್ಟೆ ತೊಡಿಸಿ ಆ ಸರೀಸೃಪವನ್ನು ಪುಟ್ಟ ರಾಜಕುಮಾರಿ ಎಂದು ಕರೆಯಲಾಗುತ್ತದೆ. ಇದು ಭೂದೇವಿಯನ್ನು ಪ್ರತಿನಿಧಿಸುವ ದೇವತೆ ಎಂದು ನಂಬಲಾಗಿದೆ. ಮೇಯರ್‌ನೊಂದಿಗೆ ಮೊಸಳೆಯ ವಿವಾಹವು ಮಾನವರು ದೈವಿಕವಾಗಿ ಸೇರುವುದನ್ನು ಸಂಕೇತಿಸುತ್ತದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್‌ ವರದಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!