ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ಲೈನ್ ಡೆಸ್ಕ್:
ಕಿರುತೆರೆ ಹಾಗೂ ಹಿರಿತೆರೆಯಲ್ಲೂ ಸಾಕಷ್ಟು ಹೆಸರು ಮಾಡಿರುವ ನಟಿ ಮಯೂರಿ, ಇತ್ತೀಚೆಗಷ್ಟೇ ತಾಯಿಯಾಗಿದ್ದಾರೆ.
ಎಲ್ಲ ಸೆಲೆಬ್ರಿಟಿಗಳಂತೆ ಇವರೂ ಕೂಡ ತಮ್ಮ ಮುದ್ದು ಮಗುವಿನ ಮುಖವನ್ನು ಅಭಿಮಾನಿಗಳಿಗೆ ತೋರಿಸಿರಲಿಲ್ಲ. ಆದರೆ ಇದೀಗ ತಮ್ಮ ಮಗ ಆರವ್ನ ಮುಖವನ್ನು ಜನರಿಗೆ ತೋರಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಫೋಟೊ, ವಿಡಿಯೋ ಹಂಚಿಕೊಂಡಿದ್ದು, ‘ನನ್ನ ಮಗ ಜನಿಸಿದ ದಿನದಿಂದ ನನ್ನ ಬದುಕೇ ಬದಲಾಗಿ ಹೋಯ್ತು.
ಈಗ ಇವನೇ ನನ್ನ ಹೊಸ ಪ್ರಪಂಚ, ನನ್ನ ಮುದ್ದುಕಂದ ಆರವ್. ಅವನು ಹುಟ್ಟಿ 15 ದಿನಕ್ಕೆ ತೆಗೆಸಿದ ಫೋಟೊಗಳಿವು ‘ಎಂದು ಬರೆದುಕೊಂಡಿದ್ದಾರೆ. ಈ ಫೋಟೊಗಳಿಗೆ ಸಾವಿರಾರು ಲೈಕ್ಸ್ ಕೂಡ ಬಂದಿದೆ.