ಏಳು ಅಂತಸ್ತಿನ ಕಟ್ಟಡದಿಂದ ಬಿದ್ದು ಎಂಬಿಬಿಎಸ್ ಟಾಪರ್ ಸೂಸೈಡ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೀದರ್‌ನಲ್ಲಿ ಏಳು ಅಂತಸ್ತಿನ ಕಟ್ಟಡದಿಂದ ಜಿಗಿದು ಎಂಬಿಬಿಎಸ್ ಟಾಪರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೀದರ್‌ನ ಬೀಮ್ಸ್ ಆಸ್ಪತ್ರೆ ಆವರಣದ ಎಂಬಿಬಿಸ್ ಹಾಸ್ಟೆಲ್ ಮಹಡಿಯಿಂದ ವಿದ್ಯಾರ್ಥಿ ಕೆಳಗೆ ಜಿಗಿದಿದ್ದಾನೆ. 22 ವರ್ಷದ ಶ್ರೀರಾಮ್ ಕಾಡಗಿ ಮೃತ ವಿದ್ಯಾರ್ಥಿ.

ಟಾಪರ್ ಆದ ಶ್ರೀರಾಮ್ ಕೆಲವು ದಿನಗಳಿಂದ ಮಂಕಾಗಿದ್ದ, ಆತ ಖಿನ್ನತೆಗೆ ಒಳಗಾಗಿದ್ದ ಎಂದು ಸ್ನೇಹಿತರು ಹೇಳಿದ್ದಾರೆ. ಬೆಳಗ್ಗೆ ಏಕಾಏಕಿ ಮಹಡಿಗೆ ತೆರಳಿ ಹಾರಿ ಶ್ರೀರಾಮ್ ಪ್ರಾಣಬಿಟ್ಟಿದ್ದಾನೆ.

ಲಕ್ಷ ಲಕ್ಷ ಖರ್ಚು ಮಾಡಿ ಮಗ ಜೀವ ಉಳಿಸುವ ವೈದ್ಯನಾಗುತ್ತಾನೆ ಎಂದು ಕನಸು ಕಟ್ಟಿದ್ದ ಪೋಷಕರ ಕನಸು ಚೂರು ಚೂರಾಗಿದೆ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!