ಬಾಕ್ಸರ್ ಮೇರಿ ಕೋಮ್‌‌ ಗೆ ಕಾಡಿದ ದುರಾದೃಷ್ಟ, ಕಾಮನ್‌ ವೆಲ್ತ್‌ ಕನಸು ಭಗ್ನ…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಆರು ಬಾರಿಯ ಬಾಕ್ಸಿಂಗ್ ವಿಶ್ವ ಚಾಂಪಿಯನ್ ಎಂಸಿ ಮೇರಿ ಕೋಮ್ ಅವರ ಕಾಮನ್‌ ವೆಲ್ತ್‌ ಗೇಮ್ಸ್‌ ನಲ್ಲಿ ಭಾಗಿಯಾಗುವ ಕನಸು ಭಗ್ನಗೊಂಡಿದೆ. ಆಯ್ಕೆ ಟ್ರಯಲ್ಸ್‌ ನಲ್ಲಿ ಅರ್ಧದಲ್ಲಿಯೇ ಹೊರಬೀಳುವ ಮೂಲಕ ಬರ್ಮಿಂಗ್‌ಹ್ಯಾಮ್ ಕ್ರೀಡಾಕೂಟದಲ್ಲಿ ಭಾಗಿಯಾಗುವ ಮೇರಿ ಕನಸು ಕಮರಿತು.
ಗಾಯದಿಂದಾಗಿ 2022 ರ ಕಾಮನ್‌ವೆಲ್ತ್ ಗೇಮ್ಸ್‌ಗಾಗಿ ನಡೆಯುತ್ತಿರುವ ಮಹಿಳಾ ಬಾಕ್ಸಿಂಗ್ ಟ್ರಯಲ್ಸ್‌ನಿಂದ ಮೇರಿ ಕೋಮ್‌ ಹೊರಗುಳಿಯುವ ಪರಿಸ್ಥಿತಿ ಉದ್ಭವಿಸಿದೆ. 48 ಕೆಜಿ ಸೆಮಿಫೈನಲ್‌ನ ಅರ್ಹತಾ ಸುತ್ತಿನಲ್ಲಿ ಹರಿಯಾಣದ ನಿತು ವಿರುದ್ಧ ಕಣಕ್ಕಿಳಿದಿದ್ದ ಮೇರಿ ಕೋಮ್ ಮೊಣಕಾಲು ಗಾಯಕ್ಕೆ ಒಳಗಾದರು. ಮೇರಿ 2018 ರಲ್ಲಿ ಕಳೆದ ಕಾಮನ್‌ ವೆಲ್ತ್ ಆವೃತ್ತಿಯಲ್ಲಿ ಚಿನ್ನದ ಪದಕವನ್ನು ಪಡೆದ ಮೊದಲ ಭಾರತೀಯ ಮಹಿಳಾ ಬಾಕ್ಸರ್ ಎಂಬ ಸಾಧನೆ ಬರೆದಿದ್ದರು.
“ನಾನು ಇದಕ್ಕಾಗಿ ತುಂಬಾ ಕಠಿಣ ತರಬೇತಿ ಪಡೆಯುತ್ತಿದ್ದೆ. ಇದು ನನ್ನ ದುರಾದೃಷ್ಟ, ನನಗೆ ಹಿಂದೆಂದೂ ಮೊಣಕಾಲು ಗಾಯವಾಗಿರಲಿಲ್ಲ,” ಎಂದು ಮೇರಿ ಕೋಮ್ ಬೇಸರದಿಂದ ಹೇಳಿದ್ದಾರೆ.
ಬಹು ಬಾರಿ ಏಷ್ಯನ್ ಚಿನ್ನದ ಪದಕ ವಿಜೇತೆ ಕೊನೆಯ ಬಾರಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು, ಅಲ್ಲಿ ಕಠಿಣ ಹೋರಾಟ ತೋರಿದ್ದ ಅವರು ಪ್ರಿ-ಕ್ವಾರ್ಟರ್‌ ನಲ್ಲಿ ಕೆಲವೆ ಅಂಕಗಳ ಅಂತರದ ಸೋಲು ಕಂಡಿದ್ದರು.
“ಇದು ನಿಜವಾಗಿಯೂ ದುರದೃಷ್ಟಕರವಾಗಿದೆ. ಆದರೆ ಅಂತಹ ವಿಷಯಗಳನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಮೇರಿ ಕ್ರೀಡಾಕೂಟಕ್ಕೆ ಕಠಿಣ ತರಬೇತಿಯನ್ನು ನಡೆಸುತ್ತಿದ್ದರು” ಎಂದು ರಾಷ್ಟ್ರೀಯ ಕೋಚ್ ಭಾಸ್ಕರ್ ಭಟ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!