Thursday, August 11, 2022

Latest Posts

ಕಾಮನ್‌ವೆಲ್ತ್ ಗೇಮ್ಸ್‌ಯಲ್ಲಿ ಭಾರತದ ಪದಕ ಬೇಟೆ ಆರಂಭ: ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದ ಸಂಕೇತ್ ಸಾಗರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಮನ್‌ವೆಲ್ತ್ ಗೇಮ್ಸ್‌ ಕ್ರೀಡಾಕೂಟದ ಎರಡನೇ ದಿನ ಪದಕಗಳ ಶುಭಾರಂಭ ಪಡೆದಿದೆ. ಭಾರತ ವೇಟ್‌ಲಿಫ್ಟಿಂಗ್‌ನ ಪುರುಷರ 55 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಭಾರತದ ಸಂಕೇತ್ ಮಹದೇವ್ ಸಾಗರ್ 248 ಕೆಜಿ ಬಾರ ಎತ್ತುವ ಮೂಲಕ ಬೆಳ್ಳಿ ಪದಕಕ್ಕೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಾರಾಷ್ಟ್ರ ಮೂಲದ ಸಂಕೇತ್ ಸಾಗರ್ ಭಾರತಕ್ಕೆ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪದಕದ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದ್ದಾರೆ.

21 ವರ್ಷದ ಯುವ ವೇಟ್‌ಲಿಫ್ಟರ್‌ 113 ಕೆಜಿ ಸ್ನ್ಯಾಚ್‌ ಹಾಗೂ 135 ಕೆಜಿ ಕ್ಲೀಜ್‌ ಅಂಡ್ ಜರ್ಕ್‌ ಹೀಗೆ ಒಟ್ಟಾರೆ 248 ಕೆಜಿ ಬಾರ ಎತ್ತವ ಮೂಲಕ ಬೆಳ್ಳಿಯ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಮಲೇಷ್ಯಾದ ಅನಿಕ್‌ ಮೊಹಮ್ಮದ್‌, 249 ಕೆಜಿ(107ಕೆಜಿ ಸ್ನ್ಯಾಚ್‌, 142 ಕೆಜಿ ಕ್ಲೀನ್& ಜೆರ್ಕ್‌) ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss