Sunday, August 14, 2022

Latest Posts

ಮಾಧ್ಯಮಕ್ಕಿದೆ ಜನರ ಮನಸ್ಸನ್ನು ಬದಲಾಯಿಸುವ ಶಕ್ತಿ: ಅಶ್ವಥ ನಾರಾಯಣ

ಹೊಸದಿಗಂತ ವರದಿ, ಕಲಬುರಗಿ:

ಇಂದಿನ ಯುಗದಲ್ಲಿ ಜನರ ಮನಸ್ಸನ್ನು ಬದಲಾಯಿಸುವ ಶಕ್ತಿ ಮಾಧ್ಯಮಕ್ಕೆ ಇದ್ದು, ಮಾಧ್ಯಮವೂ ಅತ್ಯಂತ ಶಕ್ತಿಶಾಲಿ, ಪರಿಣಾಮಕಾರಿಯಾಗಿ ಹೊರಹೊಮ್ಮುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ ನಾರಾಯಣ ಹೇಳಿದರು.
ಅವರು ನಗರದ ಬಿಜೆಪಿ ಕಚೇರಿಯಲ್ಲಿ ವಿಭಾಗ ಮಟ್ಟದ ಮಾಧ್ಯಮ ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಾರ್ಯಕರ್ತರು ಮಾಧ್ಯಮಕ್ಕೆ ಸಂಬಂಧಿಸಿದಂತೆ ಯಾವ ರೀತಿ ಸಕ್ರಿಯವಾಗಿರಬೇಕು, ಅದನ್ನು ಯಾವ ರೀತಿ ಬಳಕೆ ಮಾಡಿಕೊಳ್ಳಬೇಕೆಂದು ಅರಿತುಕೊಳ್ಳಲು ಈ ಕಾರ್ಯಗಾರವನ್ನು ಆಯೋಜಿಸಲಾಗಿದೆ ಎಂದರು.
ಸಾಮನ್ಯವಾಗಿ ಪತ್ರಕರ್ತರು ಕೇಳುವ ಪ್ರಶ್ನೆಗೆ ಯಾವ ರೀತಿಯಿಂದ ನಾವು ಸನ್ನದ್ದರಾಗಬೇಕು. ಪಕ್ಷದ ವತಿಯಿಂದ ಪತ್ರಿಕಾಗೋಷ್ಠಿಗಳನ್ನು ಹಮ್ಮಿಕೊಂಡಾಗ ಯಾವ ರೀತಿ ಪೂರ್ವ ತಯಾರಿ ಮಾಡಿಕೊಂಡಿರಬೇಕು ಎಂದು ತಿಳಿದುಕೊಳ್ಳಲು ಈ ಮಂಥನ ಕಾರ್ಯಕ್ರಮ ಉಪಕಾರಿಯಾಗಿರಲಿದೆ ಎಂದರು.
ಬಿಜೆಪಿ ಪಕ್ಷವು ತನ್ನದೇ ಆದ ವಿಚಾರಗಳನ್ನು ಇಟ್ಟುಕೊಂಡು ಜನ್ಮ ತಾಳಿದೆ. ತನ್ನ ಸಿದ್ದಾಂತ ವಿಚಾರಗಳೊಂದಿಗೆ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳದೇ, ಎಲ್ಲ ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿರುವ ಏಕೈಕ ಪಕ್ಷವಾಗಿದೆ. ರಾಜ್ಯದ ಎಲ್ಲ ಪ್ರಾದೇಶಿಕ ಪಕ್ಷಗಳು ಬರೀ ಕುಟುಂಬಕ್ಕೆ ಸಿಮಿತವಾಗಿವೆ. ಆದರೆ ಬಿಜೆಪಿ ತನ್ನ ಕಾರ್ಯಕರ್ತರ ಪಕ್ಷವಾಗಿದೆ ಎಂದರು. 4 ದಶಕಗಳಿಂದ ರಾಷ್ಟ್ರೀಯ ವಿಚಾರಗಳ ಜೊತೆಗೆ ದೇಶವನ್ನು ಮುನ್ನೆಡಸುತ್ತಿದೆ ಎಂದರು.
ವಿಧಾನ ಪರಿಷತ ಸದಸ್ಯ ಶಶೀಲ ನಮೋಶಿ ಮಾತನಾಡಿ, ರಾಜಕೀಯ ವ್ಯಕ್ತಿಗಳಿಗೆ ಬೆಳೆಯಲು ಮಾಧ್ಯಮವೂ ಉಪಕಾರಿಯಾಗಿದೆ. ಮಾದ್ಯಮದಿಂದಲೇ ಎಲ್ಲವೂ ಬದಲಾವಣೆ ಆಗಲಿದೆ. ಮಾಧ್ಯಮದ ಜೊತೆಗೆ ನಮ್ಮ ಒಡನಾಟ ಉತ್ತಮವಾಗಿರಬೇಕು. ಮಾಧ್ಯಮ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ನಾವು ನಮ್ಮ ಕಾರ್ಯಕರ್ತರು ಜಾಗೃತವಾಗಿ ಇದ್ದಾಗ ಮಾತ್ರ ನಾವು ಬೆಳೆಯಲು ಸಾಧ್ಯವಿದೆ ಎಂದರು.
ನಗರ ಅಧ್ಯಕ್ಷ ಸಿದ್ದಾಜಿ ಪಾಟೀಲ ಮಾತನಾಡಿದರು. ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ, ವೆಂಕಟಪ್ರಸಾದ ಮಾಲೇಪಾಟಿ, ಪ್ರಶಾಂತ ಕೆಡಂಜಿ, ಸಾಹೇಬಗೌಡ ಪಾಟೀಲ, ಸೂರಜ ತೀವಾರಿ, ಬಾಬುರಾವ ಹಾಗರಗುಂಡಗಿ, ನಾಗರಾಜ ಮಹಾಗಾಂವಕರ್, ಡಿ.ಎನ್.ಜೋಶಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss