ಹೊಸದಿಗಂತ ಡಿಜಿಟಲ್ ಡೆಸ್ಕ್:
ವೈದ್ಯಕೀಯ ವಿದ್ಯಾರ್ಥಿಗಳು ಜೀನ್ಸ್ ಹಾಗೂ ಟೀ ಶರ್ಟ್ ಧರಿಸುವಂತಿಲ್ಲ ಎಂದು ಆಂಧ್ರಪ್ರದೇಶ ರಾಜ್ಯ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಆದೇಶಿಸಿದೆ.
ಸಹಾಯಕರು, ಪ್ರಾಧ್ಯಾಪಕರು ಮತ್ತು ವೈದ್ಯಕೀಯ ವಿಧ್ಯಾರ್ಥಿನಿಯರು ಸೀರೆ ಅಥವಾ ಚೂಡಿದಾರ್ ಮಾತ್ರ ಧರಿಸಬೇಕು ಎಂದು ಸೂಚಿಸಲಾಗಿದೆ. ಕೆಲ ವಿದ್ಯಾರ್ಥಿಗಳು, ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ನಿಗದಿತ ಡ್ರೆಸ್ಕೋಡ್ ಅನುಸರಿಸದ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ.
ಎಂಬಿಬಿಎಸ್ ವಿದ್ಯಾರ್ಥಿಗಳು ಹಾಗೂ ಪಿಜಿ ವೈದ್ಯಕೀಯ ವಿದ್ಯಾರ್ಥಿಗಳು ಶುಭ್ರ ಬಟ್ಟೆ ಧರಿಸಬೇಕು, ಕೂದಲು ಬಿಡುವಂತಿಲ್ಲ. ಇನ್ನು ಪುರುಷರು ಕ್ಲೀನ್ ಶೇವ್ ಮಾಡಬೇಕು ಎಂದು ಸೂಚಿಸಲಾಗಿದೆ. ಕಡ್ಡಾಯವಾಗಿ ಸ್ಟೆತಸ್ಕೋಪ್ ಹಾಗೂ ಏಪ್ರಾನ್ ಧರಿಸಿರಬೇಕು ಎನ್ನಲಾಗಿದೆ.