Wednesday, August 10, 2022

Latest Posts

ಶಬರಿಮಲೆ ತಂತ್ರಿವರ್ಯ ಕಂಠರರ್ ರಾಜೀವರ್ ರನ್ನು ಭೇಟಿ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್

ಹೊಸ ದಿಗಂತ ವರದಿ, ಕಾಸರಗೋಡು:

ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರು ಶಬರಿಮಲೆ ಶ್ರೀ ಧರ್ಮಶಾಸ್ತಾ ಕ್ಷೇತ್ರದ ತಂತ್ರಿವರ್ಯ ಕಂಠರರ್ ರಾಜೀವರ್ ಅವರನ್ನು ಗುರುವಾರ ಭೇಟಿ ಮಾಡಿದರು. ಚೆಂಗನ್ನೂರು ತಾಯಮನ್ ಮಠಕ್ಕೆ ತೆರಳಿ ಬಿಜಿಪಿ ರಾಜ್ಯಾಧ್ಯಕ್ಷರು ತಂತ್ರಿವರ್ಯರಲ್ಲಿ ಮಾತುಕತೆ ನಡೆಸಿದರು. ಶಬರಿಮಲೆಯ ಆಚಾರ ಅನುಷ್ಠಾನಗಳ ಸಂರಕ್ಷಣೆಗಾಗಿ ದಿಟ್ಟವಾದ ಹಾಗೂ ದೃಢವಾದ ನಿರ್ಧಾರ ಕೈಗೊಂಡ ಕಂಠರರ್ ರಾಜೀವರ್ ಅವರು ಮಾದರಿಯಾಗಿದ್ದಾರೆ ಎಂದು ಕೆ.ಸುರೇಂದ್ರನ್ ಇದೇ ವೇಳೆ ಅಭಿಪ್ರಾಯಪಟ್ಟರು.
ಶಬರಿಮಲೆ ಕ್ಷೇತ್ರಕ್ಕೆ ಅನುಕೂಲಕರವಾಗುವ ರೀತಿಯ ವ್ಯವಸ್ಥೆಗಳನ್ನು ಜಾರಿಗೆ ತರುವುದರಲ್ಲಿ ತನಗೆ ಸಂತೋಷವಿದೆ. ನ್ಯಾಯಾಲಯದ ಪರಿಗಣನೆಯಲ್ಲಿರುವ ವಿಷಯವಾದ್ದರಿಂದ ಆಚಾರ ಅನುಷ್ಠಾನಗಳ ಬಗ್ಗೆ ಈಗ ಏನನ್ನೂ ಹೇಳಲು ಸಾಧ್ಯವಿಲ್ಲ. ಈ ಕುರಿತು ಕಾನೂನು ಜಾರಿಗೊಳಿಸಲಾಗುವುದು ಎಂದು ಹಲವು ಮಂದಿ ಹೇಳುತ್ತಿದ್ದು , ಕ್ಷೇತ್ರಕ್ಕೆ ಮತ್ತು ಭಕ್ತರಿಗೆ ಅನುಕೂಲಕರವಾಗುವ ರೀತಿಯ ಕಾನೂನು ಬರುವುದನ್ನು ನಿರೀಕ್ಷಿಸಲಾಗುವುದು ಎಂದು ಕಂಠರರ್ ರಾಜೀವರ್ ಇದೇ ಸಂದರ್ಭದಲ್ಲಿ ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ನೇತೃತ್ವದಲ್ಲಿ ನಡೆಯುತ್ತಿರುವ ವಿಜಯ ಯಾತ್ರೆ ಆಲಪ್ಪುಳಕ್ಕೆ ಗುರುವಾರ ಆಗಮಿಸಿದೆ. ಆಲಪ್ಪುಳ ಜಿಲ್ಲೆಯ ಗಡಿ ಪ್ರದೇಶದಾದ ಕುಟ್ಟೂರಿನಲ್ಲಿ ಪಕ್ಷದ ಕಾರ್ಯಕರ್ತರು ಜಾಥಾಕ್ಕೆ ಹೃದಯಸ್ಪರ್ಶಿ ಸ್ವಾಗತ ನೀಡಿದರು. ತಿರುವಲ್ಲ , ರಾಣಿ, ಪತ್ತನಂತ್ತಿಟ್ಟ , ಅಡೂರ್, ಕೋನ್ನಿ ಎಂಬೆಡೆ ವಿಜಯ ಯಾತ್ರೆಗೆ ಸ್ವಾಗತ ನೀಡಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss