Sunday, July 3, 2022

Latest Posts

ಚಿಕನ್ ಕಳ್ಸಿ ಬಿಗ್‌ಬಾಸ್ ಎನ್ನುತ್ತಿದ್ದ ಕಂಟೆಸ್ಟೆಂಟ್ಸ್‌ಗೆ ಶಾಕ್, ಚಿಕನ್ ಜೊತೆ ಇಬ್ಬರು ವೈಲ್ಡ್ ಕಾರ್ಡ್‌ಗಳ ಎಂಟ್ರಿ!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಬಿಗ್‌ಬಾಸ್‌ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಈಗಿನ್ನ ಚಕ್ರವರ್ತಿ ಚಂದ್ರಚೂಡ್ ಬಂದಿದ್ದರು.
ಇವರನ್ನು ಕಂಟೆಸ್ಟೆಂಟ್ಸ್ ಒಪ್ಪಿಕೊಳ್ಳೋಕೆ ಮುನ್ನವೇ ಇನ್ನಿಬ್ಬರು ಬೆಡಗಿರಯರು ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಈಗಾಗಲೇ ಎಲಿಮಿನೇಟ್ ಆಗಿರೋರೆಲ್ಲ ಹುಡುಗಿಯರೇ ಆದ್ದರಿಂದ ವೈಲ್ಡ್ ಕಾರ್ಡ್ ಕೂಡ ಹುಡುಗಿಯೇ ಆಗಿರುತ್ತಾರೆ ಎಂದು ಮನೆಯವರೆಲ್ಲ ಊಹಿಸಿದ್ರು. ವಾರಾಂತ್ಯದಲ್ಲಿ ಸುದೀಪ್ ಜೊತೆ ಮಾತನಾಡುವಾಗ ಮಂಜು ‘ಹುಡುಗೀರ್ ಬಂದಿದ್ರೆ ಚನ್ನಾಗಿರೋದು’ ಅಂತ ಬೇರೆ ಹೇಳಿದ್ರು. ಮಂಜು ಬೇಡಿಕೆಗೆ ಬಿಗ್‌ಬಾಸ್ ಅಸ್ತು ಅಂದ ರೀತಿ ಕಾಣುತ್ತಿದೆ.
ಮೊದಲು ಕನ್ಫೆಶನ್ ರೂಂನಲ್ಲಿ ಮೊದಲನೆ ವೈಲ್ಡ್ ಕಾರ್ಡ್ ವೈಜಯಂತಿ ಕುಳಿತಿದ್ದರು. ರಂಗಭೂಮಿಯಲ್ಲಿ ಗುರುತಿಸಿಕೊಂಡಿರುವ ವೈಜಯಂತಿ ಅಮ್ಮಾಚಿಯ ನೆನಪುಗಳು ಎಂಬ ಸಿನಿಮಾ ಮಾಡಿದ್ದಾರೆ. ಜೊತೆಗೆ ಪಾಕಶಾಲ ಹೊಟೇಲ್ಸ್ ಕೂಡ ಇವರದ್ದೇ. ಇನ್ನು ಮತ್ತೊಂದು ವೈಲ್ಡ್ ಕಾರ್ಡ್ ಎಂಟ್ರಿ ಪ್ರಿಯಾಂಕಾ ತಿಮ್ಮೇಶ್ ಕೂಡ ಸಿನಿಮಾಗಳಲ್ಲಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಒಟ್ಟಾರೆ ಹುಡುಗಿಯರು ಕಮ್ಮಿ ಎಂದು ಮನೆ ಹೆಣ್ಮಕ್ಕಳು ಗೋಳಿಟ್ಟಿದ್ದರೆ ಇದೀಗ ಹೊಸತಾಗಿ ಇಬ್ಬರನ್ನು ಕಳುಹಿಸಲಾಗಿದೆ. ಇನ್ಮುಂದೆ ಮನೆ ರಂಗು ಹೇಗೆ ಬದಲಾಗುತ್ತದೆ ಕಾದು ನೋಡಬೇಕಿದೆ..

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss