ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಬಾಗಲಕೋಟೆ:
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ಕೂಡಲಸಂಗಮ ಪಂಚಮಸಾಲಿ
ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಹೋರಾಟದ ಬೆನ್ನಲ್ಲೇ ಪಂಚಮಸಾಲಿ ಇತರೆ ಮಠಾಧೀಶರಿಂದ ಪ್ರತ್ಯೇಕ ಹೋರಾಟಕ್ಕೆ ಸಿದ್ದತೆ ನಡೆದಿದೆ.
ಇಂದು ಜಮಖಂಡಿಯಲ್ಲಿ ಸ್ವಾಮೀಜಿಗಳು ಸಭೆ ಸೇರಿದ್ದಾರೆ.೨೦ ಕ್ಕೂ ಹೆಚ್ಚು ಜನ ಪಂಚಮಸಾಲಿ ಸ್ವಾಮೀಜಿಗಳು ಸೇರಿದ್ದಾರೆ.ಕೂಡಲಸಂಗಮ ಪಂಚಮಸಾಲಿ ಪೀಠದ ಕೆಲ ಟ್ರಸ್ಟಿಗಳು ಸಭೆಯಲ್ಲಿ ಭಾಗಿ ಆಗಲಿದ್ದಾರೆ.೨ಎ ಮೀಸಲಾತಿಗಾಗಿ ಪ್ರತ್ಯೇಕ ಹೋರಾಟಕ್ಕೆ ಪ್ಲಾನ್ ಮಾಡಲಾಗುತ್ತಿದೆ.
ಬಬಲೇಶ್ವರ ಸ್ವಾಮೀಜಿ, ಮನಗೂಳಿ ಸಂಗನಬಸವ ಸ್ವಾಮೀಜಿ, ಕಮರಿಮಠದ ಸಿದ್ದಲಿಂಗ ಸ್ವಾಮೀಜಿ, ಯೋಗೇಶ್ವರಿ ಮಾತಾ, ಗುರುಬಸವದೇವರು ಬೆಳಗಾವಿ ಸೇರಿದಂತೆ ಅನೇಕ ಪಂಚಮಸಾಲಿ ಸ್ವಾಮೀಜಿಗಳು ಭಾಗಿಯಾಗಲಿದ್ದಾರೆ.
ಈಗ ಇರುವ ಎರಡು ಪೀಠಗಳನ್ನು ಹೊರತುಪಡಿಸಿ ಇರುವ ಸ್ವಾಮೀಜಿಗಳ ಒಕ್ಕೂಟದ ಸಭೆಗೆ ಕೂಡಲಸಂಗಮ ಪಂಚಮಸಾಲಿ ಪೀಠದ ಟ್ರಸ್ಟ್ ನ ಕೆಲ ಸದಸ್ಯರು ಭಾಗವಹಿಸುತ್ತಿರುವುದು ತೀವ್ರ ಕುತೂಹಲ ಕೆರಕಳಿಸಿದೆ.