ಹೊಸದಿಗಂತ ವರದಿ, ಶಿವಮೊಗ್ಗ:
ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿನ ಸ್ವಚ್ಛತಾ ಕೆಲಸಗಾರನೋರ್ವ ಸಜ್ಜಾ ಕೆಲಸ ಮಾಡುವಾಗ ಆಯ ತಪ್ಪಿ ಬಿದ್ದು, ಗಂಭೀರ ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.
ಜೀವನ್ ಗಾಯಗೊಂಡಿದ್ದು, ಈತ ಹೊರಗುತ್ತಿಗೆ ನೌಕರನಾಗಿದ್ದಾನೆ. ಎರಡೂ ಕಾಲುಗಳು ಮುರಿದಿದ್ದು, ತಲೆಗೂ ಗಾಯವಾಗಿದೆ. ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವುದೇ ಸುರಕ್ಷತಾ ಕ್ರಮವಹಿಸದೆ ಎರಡನೇ ಮಹಡಿಯ ಸಜ್ಜಾ ಸ್ವಚ್ಛತೆಗೆ ಮೇಲೆ ಹತ್ತಿಸಲಾಗಿತ್ತು. ಈ ಸಂದರ್ಭದಲ್ಲಿ ತಲೆಸುತ್ತು ಬಂದು ಕೆಳಗೆ ಬಿದ್ದು ಗಾಯಗೊಂಡಿದ್ದಾನೆ.ಬೆಳಗಿನ ಉಪಹಾರವಾಗಿಲ್ಲ. ತಿಂಡಿ ತಿಂದು ಬಳಿಕ ಕೆಲಸ ಮಾಡುವುದಾಗಿ ಹೇಳಿದ್ದರೂ ಕೇಳದೆ ಮೇಲುಉಸ್ತುವಾರಿ ನೋಡಿಕೊಳ್ಳುತ್ತಿದ್ದವರು ಬಲವಂತವಾಗಿ ಮೇಲೆ ಹತ್ತಿಸಿದ್ದರಿಂದಾಗಿ ಅನಾಹುತ ಸಂಭವಿಸಿದೆ ಎನ್ನಲಾಗಿದೆ.