ಹೊಸದಿಗಂತ ಆನ್ಲೈನ್ ಡೆಸ್ಕ್:
ಚಿರು ನಿಧನದ ನಂತರ ಮೇಘನಾ ರಾಜ್ ಸಿನಿಮಾಗಳತ್ತ ಮುಖ ಮಾಡಿಲ್ಲ. ಮನೆಯಲ್ಲಿ ರಾಯನ್ ಆರೈಕೆ ಮಾಡುತ್ತಾ ಸಿನಿರಂಗದಿಂದ ದೂರವೇ ಇದ್ದಾರೆ. ಆದರೆ ಇದೀಗ ಗುಡ್ನ್ಯೂಸ್ ಒಂದನ್ನು ಮೇಘನಾ ಅಭಿಮಾನಿಗಳಿಗೆ ನೀಡಿದ್ದಾರೆ.
ಮೇಘನಾ ಚಿತ್ರರಂಗಕ್ಕೆ ಮತ್ತೆ ಎಂಟ್ರಿ ಕೊಡುತ್ತಿದ್ದು, ನಾಳೆ ಸಿನಿಮಾ ಸೆಟ್ಟೇರಲಿದೆ. ಹೌದು, ಚಿರು ಜನ್ಮದಿನದಂದೇ ಮೇಘನಾ ಸಿನಿಮಾ ಸೆಟ್ಟೇರಲಿದ್ದು, ಪನ್ನಗಾಭರಣ ಚಿತ್ರ ನಿರ್ಮಾಣ ಮಾಡಲಿದ್ದಾರೆ.
ನಿರ್ದೇಶಕ ವಿಶಾಲ್ ಹಾಗೂ ವಾಸುಕಿ ವೈಭವ್ ಕೂಡ ಈ ಪ್ರಾಜೆಕ್ಟ್ಗೆ ಕೈ ಜೋಡಿಸಿದ್ದು, ಮೇಘನಾ ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾರೆ.
ಈ ಸಿನಿಮಾ ಮುಂಚೆಯೇ ಪ್ಲಾನ್ ಆಗಿದ್ದು, ಚಿರು ಜೊತೆ ಸೇರಿ ನಿರ್ಮಾಣ ಮಾಡಬೇಕು ಎನ್ನುವುದು ಪನ್ನಗಾಭರಣ ಅವರ ಆಸೆಯಾಗಿತ್ತು.ಅದನ್ನು ಮಾಡಲು ಸಾಧ್ಯವಾಗಲಿಲ್ಲ. ಆದರೆ ಗೆಳೆಯನ ಆಸೆಯನ್ನು ಪನ್ನಗಾಭರಣ ಈಡೇರಿಸಲಿದ್ದು, ನಾಳೆಯೇ ಸಿನಿಮಾ ಸೆಟ್ಟೇರಲಿದೆ.
ಸಿನಿಮಾ ಹೆಸರು ಏನು ಎನ್ನುವುದನ್ನು ರಿವೀಲ್ ಮಾಡಿಲ್ಲ. ಒಟ್ಟಾರೆ ಮೇಘನಾ ಮತ್ತೆ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವುದು ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿ ನೀಡಿದೆ.