ಬಾಂಗ್ಲಾಕ್ಕೆ ಆಸರೆಯಾದ ಮೆಹದಿ ಹಸನ್: ಟೀಮ್ ಇಂಡಿಯಾ ಗೆಲುವಿಗೆ 272 ಟಾರ್ಗೆಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಟೀಂ ಇಂಡಿಯಾ ವಿರುದ್ಧ ಬಾಂಗ್ಲಾದೇಶ ತಂಡ 7 ವಿಕೆಟ್ ಕಳೆದುಕೊಂಡು 271 ರನ್ ಬಾರಿಸಿದ್ದು, ರೋಹಿತ್ ಪಡೆಗೆ ಸವಾಲಿನ ಗುರಿ ನೀಡಿದೆ.
ಮೆಹದಿ ಹಸನ್(100*) ಹಾಗೂ ಮೊಹಮದುಲ್ಲಾ(77) ಆಕರ್ಷಕ ಶತಕದ ಜತೆಯಾಟ ಬಾಂಗ್ಲಾ ತಂಡಕ್ಕೆ ಆಸರೆಯಾಗಿದೆ .
ಟಾಸ್ ಗೆದ್ದ ಬಾಂಗ್ಲಾದೇಶ ತಂಡದ ನಾಯಕ ಲಿಟನ್ ದಾಸ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಆರಂಭದಲ್ಲೇ ವೇಗಿ ಸಿರಾಜ್, ಅನ್ಮೂಲ್ ಹಕ್(11) ಹಾಗೂ ನಾಯಕ ಲಿಟನ್ ದಾಸ್(7) ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ನಜ್ಮುಲ್ ಹೊಸೈನ್ ಶಾಂಟೋ 21 ರನ್ ಬಾರಿಸಿ ವೇಗಿ ಉಮ್ರಾನ್ ಮಲಿಕ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಶಕೀಬ್ ಅಲ್ ಹಸನ್, ಮುಷ್ಫಿಕುರ್ ರಹೀಂ ಹಾಗೂ ಅಫಿಫ್ ಹೊಸೈನ್‌ಗೆ ವಾಷಿಂಗ್ಟನ್ ಸುಂದರ್ ಪೆವಿಲಿಯನ್ ಹಾದಿ ತೋರಿಸಿದರು. 19 ಓವರ್ ಅಂತ್ಯದ ವೇಳೆಗೆ ಬಾಂಗ್ಲಾದೇಶ ತಂಡವು 69 ರನ್‌ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು.
ಈ ವೇಳೆ ಜೊತೆಯಾದ ಮೊಹಮದುಲ್ಲಾ-ಮೆಹದಿ ಹಸನ್ ತಂಡಕ್ಕೆ ಆಸರೆಯಾದರು. ಈ ಜೋಡಿ 165 ಎಸೆತಗಳನ್ನು ಎದುರಿಸಿ 148 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!