ಮನೆಯಲ್ಲೇ ತಯಾರು ಮಾಡಿ ಮೆಹೆಂದಿ ಹೇರ್‌ ಪ್ಯಾಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಲೆಹೊಟ್ಟು ಮತ್ತು ರೇಷ್ಮೆಯಂತಹ ನಯವಾದ ಕೂದಲಿಗೆ ಅತ್ಯಂತ ಜನಪ್ರಿಯ ಮತ್ತು ಪರಿಣಾಮಕಾರಿ ಮನೆಯಲ್ಲಿಯೇ ಮೆಹೆಂದಿ ತಯಾರು ಮಾಡಬಹುದು. ಇದರಲ್ಲಿ ಯಾವುದೇ ಅಡ್ಡಪರಿಣಾಮಗಳಿರುವುದಿಲ್ಲ.  ನೈಸರ್ಗಿಕವಾಗಿ ಉತ್ಪಾದಿಸಿದ ಪದಾರ್ಥಗಳೊಂದಿಗೆ ರಾಸಾಯನಿಕ ಮುಕ್ತವಾಗಿದ್ದು, ರೇಷ್ಮೆಯಂತೆ ಹೊಳೆಯುವ ಕೂದಲು ನಿಮ್ಮದಾಗುತ್ತದೆ.

ಬೇಕಾಗುವ ಪದಾರ್ಥ: 

  • 2 ಕಪ್ ನೀರು
  • 2 ಟೇಬಲ್ಸ್ಪೂನ್ ಚಹಾ ಪುಡಿ
  • 1 ಟೀಸ್ಪೂನ್ ಮೆಂತ್ಯ
  • 5 ಲವಂಗ
  • 1 ಕಪ್ ಗೋರಂಟಿ / ಮೆಹೆಂದಿ ಪುಡಿ
  • 2 ಟೇಬಲ್ಸ್ಪೂನ್ ಸೀಗೆಕಾಯಿ ಪುಡಿ
  • 1/2 ನಿಂಬೆ ರಸ
  • 2 ಟೇಬಲ್ಸ್ಪೂನ್ ಮೊಸರು     

ಮಾಡುವ ವಿಧಾನ: 

ಒಂದು ಕಾಫಿ ಬಟ್ಟಲಿಗೆ ನೀರು, ಟೀ ಪುಡ, ಲವಂಗ, ಮೆಂತ್ಯೆ ಹಾಕಿ ಐದು ನಿಮಿಷ ಚೆನ್ನಾಗಿ ಕುದಿಸಿ, ತಣಿದ ಮೇಲೆ ಶೋಧಿಸಿ ಪಕ್ಕಕ್ಕಿಡಿ ಅದರೊಳಗೆ ಮೆಹೆಂದಿ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಸೀಗೇಕಾಯಿ ಪುಡಿ, ನಿಂಬೆ ರಸ ಸೇರಿಸಿ ಮತ್ತೊಮ್ಮೆ ಮಿಶ್ರಣ ಮಾಡಿ ಎಂಟು ಗಂಟೆಗಳ ಕಾಲ ಪಕ್ಕಕ್ಕಿಡಿ. ಕೊನೆಗೆ ಮೊಸರು ಸೇರಿಸಿ ತೆಲೆಗೆ ಹಚ್ಚಿ ಎರಡು ಗಂಟೆ ಬಳಿಕ ವಾಶ್‌ ಮಾಡಿದ್ರೆ ನುಣುಪಾದ ಕೂದಲು ನಿಮ್ಮದಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!