ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮೆಹುಲ್‌ ಚೋಕ್ಸಿ ‘ನಿಷೇಧಿತ ವಲಸಿಗ’: ಡೊಮಿನಿಕಾ ಸರ್ಕಾರ ಘೋಷಣೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………… 

ಹೊಸದಿಗಂತ ಆನ್ ಲೈನ್ ಡೆಸ್ಕ್:

ಪಂಜಾಬ್‌ ನ್ಯಾಷನಲ್ ಬ್ಯಾಂಕ್ ಸಹಿತ ದೇಶದ ವಿವಿಧ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಜ್ರದ ವ್ಯಾಪಾರಿ ಮೆಹುಲ್‌ ಚೋಕ್ಸಿಯನ್ನು ‘ನಿಷೇಧಿತ ವಲಸಿಗ’ ಎಂದು ಡೊಮಿನಿಕಾ ಸರ್ಕಾರ ಘೋಷಿಸಿದೆ.
ಡೊಮಿನಿಕಾದ ಪರಿಷ್ಕೃತ ಸೆಕ್ಷನ್‌ 5(1) (f) ವಲಸೆ ಮತ್ತು ಪಾಸ್‌ಪೋರ್ಟ್‌ ಕಾಯ್ದೆ-2017ರ ಅಡಿ ಮೆಹುಲ್‌ ಚೋಕ್ಸಿಯನ್ನು ನಿಷೇಧಿತ ವಲಸಿಗ ಎಂದು ಘೋಷಿಸಿದ್ದು, ಇದರಿಂದ ಚೋಕ್ಸಿಯನ್ನು ಸ್ವದೇಶಕ್ಕೆ ಕರೆತರುವ ಭಾರತದ ಪ್ರಯತ್ನಕ್ಕೆ ಶಕ್ತಿ ತುಂಬಿದಂತಾಗಿದೆ.
ಇನ್ನು ಕಾಮಲ್‌ವೆಲ್ತ್‌ ರಾಷ್ಟ್ರ ಡೊಮಿನಿಕಾಗೆ ಪ್ರವೇಶಿಲು ಚೋಕ್ಸಿಗೆ ಅನುಮತಿ ಇಲ್ಲ. ಈ ಸಂಬಂಧ ಪೊಲೀಸರು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಡೊಮಿನಿಕಾ ಸರ್ಕಾರದ ಸಚಿವ ರೇಬಾರ್ನ್‌ ಬ್ಲ್ಯಾಕ್‌ಮೊರೆಸೂಚಿಸಿದ್ದಾರೆ.
ಈ ಕುರಿತಾಗಿ ಮೆಹುಲ್‌ ಚೋಕ್ಸಿ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಮುನ್ನವೇ ಆತನ ಮನವಿಯನ್ನು ತಿರಸ್ಕರಿಸಿ, ಭಾರತಕ್ಕೆ ವಾಪಸ್‌ ಕಳುಹಿಸಬೇಕೆಂದು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅಲ್ಲಿನ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss