spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, October 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮುಂಬೈ-ಪುಣೆ: ನಾಳೆಯಿಂದ ಅತ್ಯಾಧುನಿಕ ಎಲೆಕ್ಟ್ರಿಕ್ ಬಸ್ ಸೇವೆ ಆರಂಭ

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ಎಲೆಕ್ಟ್ರಿಕ್ ಬಸ್ ಕಾರ್ಯಾಚರಣೆಯ ಇವಿ ಟ್ರಾನ್ಸ್ ಪ್ರೈವೇಟ್ ಲಿ. ಸಂಸ್ಥೆ ಮುಂಬೈ- ಪುಣೆ ನಡುವೆ ವಿದ್ಯುತ್ ಬಸ್ ಸಂಚಾರ ಆರಂಭಿಸಲಿದೆ. ಇದಕ್ಕೆ ಪುರಿ ಬಸ್ ಎಂದು ಹೆಸರಿಸಲಾಗಿದೆ. ನಾಳೆ(ಅ.15)ಯಿಂದ ಈ ಬಸ್ ಸೇವೆ ಆರಂಭವಾಗಲಿದೆ.

ಏನಿದರ ವಿಶೇಷತೆ?

  • ಒಮ್ಮೆ ಚಾರ್ಜ್ ಮಾಡಿದರೆ 350 ಕಿ.ಮೀ ದೂರ ಕ್ರಮಿಸಲಿದೆ.
  • ಚಾಲಕ ಹಾಗೂ ಓರ್ವ ಸಿಬ್ಬಂದಿ ಹೊರತುಪಡಿಸಿ 45 ಮಂದಿಗೆ ಆಸನದ ವ್ಯವಸ್ಥೆ ಇದೆ.
  • ಡೀಸೆಲ್ ಬಸ್ ಗಳಿಗೆ ಹೋಲಿಸಿದರೆ ಇದರಲ್ಲಿ ಪ್ರಯಾಣ ದರ ಹಾಗೂ ನಿರ್ವಹಣಾ ವೆಚ್ಚವೂ ಕಡಿಮೆ.
  • ದೂರ ಪ್ರಯಾಣಕ್ಕೆ ಅನುಗುಣವಾಗಿ ಆರಾಮದಾಯಕ ಮತ್ತು ಐಷಾರಾಮಿ ಪುಶ್ ಬ್ಯಾಕ್ ಸೀಟ್ ಗಳು ಇವೆ.
  • ಬಸ್ ನಲ್ಲಿ ಅತ್ಯಾಧುನಿಕ ಟಿವಿ, ಇನ್ಫೋ ಟೈನ್ ಮೆಂಟ್ ವ್ಯವಸ್ಥೆ ಇದೆ.
  • ಪ್ರಯಾಣಿಕರಿಗೆ ವೈಫೈ, ಯುಎಸ್ ಬಿ ಚಾರ್ಜರ್ ವ್ಯವಸ್ಥೆ, ಲಗೇಜ್ ಗೆ 5 ಕ್ಯೂಬಿಕ್ ಮೀಟರ್ ಜಾಗ ಮೀಸಲು.

ಮೇಘಾ ಎಂಜಿನಿಯರಿಂಗ್ ಲಿ. ಗ್ರೂಗ್ ನ ಭಾಗವಾಗಿರುವ ಇವಿ ಟ್ರಾನ್ಸ್ ಫ್ರೈವೇಟ್ ಲಿ. ಇದೇ ಮೊದಲ ಬಾರಿಗೆ ದೇಶದ ಎರಡು ಪ್ರಮುಖ ನಗರಗಳ ನಡುವೆ ವಿದ್ಯುತ್ ಬಸ್ ಸಂಚಾರ ಪ್ರಾರಂಭಿಸುತ್ತಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss