VIDEO : ಮೇಕೆದಾಟು – ಇಷ್ಟಕ್ಕೂ ಚೆಂಡು ಯಾರ ಅಂಗಳದಲ್ಲಿದೆ? ನಿರ್ಧಾರ ಯಾರದ್ದು?

0
170

ಮೇಕೆದಾಟು ಯೋಜನೆ ಸಂಬಂಧ ಕೇಂದ್ರದಿಂದ ತಮಗೆ ಅದನ್ನು ನಿಲ್ಲಿಸುವ ಭರವಸೆ ಸಿಕ್ಕಿದೆ ಎಂಬರ್ಥದಲ್ಲಿ ತಮಿಳುನಾಡು ಮುಖ್ಯಮಂತ್ರಿ ಹೇಳಿರುವುದು ಸಹಜವಾಗಿ ಕೆಲವು ಪ್ರಶ್ನೆಗಳನ್ನು ಎಬ್ಬಿಸುತ್ತದೆ. ಆದರೆ ವಾಸ್ತವದಲ್ಲಿ ನಿಜಕ್ಕೂ ಚೆಂಡು ಯಾರ ಅಂಗಳದಲ್ಲಿದೆ?

ಜುಲೈ 19ರಂದು ರಾಜ್ಯಸಭೆಯಲ್ಲಿ ಮೇಕೆದಾಟು ವಿಚಾರಕ್ಕೆ ಸಂಬಂಧಿಸಿದಂತೆ ಜಲಶಕ್ತಿ ಸಚಿವಾಲಯದ ಲಿಖಿತ ಉತ್ತರ ಒಂದಿದೆ. ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗಳಿಗೆ ಸಿಗುವ ಲಿಖಿತ ಉತ್ತರದಲ್ಲಿ ರಾಜಕೀಯ ಮೇಲಾಟಗಳಿಗೆ ಅವಕಾಶ ಕಡಿಮೆ. ಅಲ್ಲಿ ವಸ್ತುಸ್ಥಿತಿ ಸಹಜವಾಗಿಯೇ ಹೆಚ್ಚು ಅನಾವರಣವಾಗುವುದಕ್ಕೆ ಅವಕಾಶ ಇರುತ್ತೆ. ಅಲ್ಲಿ ತಿಳಿದುಬಂದಿರುವ ಅಂಶಗಳಾದರೂ ಯಾವವು?

LEAVE A REPLY

Please enter your comment!
Please enter your name here