ಹೊಸದಿಗಂತ ವರದಿ, ಕೊಪ್ಪಳ:
ಕುಡಿದ ಅಮಲಿನಲ್ಲಿ ಪತಿಯೊಬ್ಬ ಪತ್ನಿ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಗರದ ದೇವರಾಜ ಅರಸು ಕಾಲೋನಿಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಬುಡ್ಡಪ್ಪ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ.
ಪತಿ ಬುಡ್ಡಪ್ಪ ನಿತ್ಯ ಕುಡಿದು ಬಂದು ಜಗಳ ಮಾಡಿ ಪತ್ನಿಗೆ ಕಿರುಕುಳ ನೀಡುತ್ತಿದ್ದನು ಆದರೆ ಶನಿವಾರ ರಾತ್ರಿ ಕುಡಿದು ಬಂದ ಬುಡ್ಡಪ್ಪ ಹೆಂಡತಿ ಚನ್ನಮ್ಮಳೊಂದಿಗೆ ಜಗಳ ತಗೆದಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ವಿಕೊಪಕ್ಕೆ ಹೋದ ಸಂದರ್ಭದಲ್ಲಿ ಕುಪಿತಗೊಂಡ ಪತಿ ಪತ್ನಿ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಮನೆಯಲ್ಲಿಯೇ ಇದ್ದ ಮಗಳು ದೀಪಾ ಸೇರಿ ಅಕ್ಕಪಕ್ಕದವರು ತಕ್ಷಣ ಬೆಂಕಿ ನಂದಿಸಿದ್ದಾರೆ. ಮಹಿಳೆ ಎದೆ, ಕುತ್ತಿಗೆ ಹಾಗೂ ಕೈ ಸುಟ್ಟಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಘಟನೆ ಕುರಿತು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ವಿಚಾರಣೆ ಮುಂದುವರೆಸಿದ್ದಾರೆ.