2024ರ ಪುರುಷರ ಟಿ20 ವಿಶ್ವಕಪ್ ನಲ್ಲಿ ಇರಲಿದೆ ಹಲವು ವಿಶೇಷತೆಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

2024ರ ಪುರುಷರ ಟಿ20 ವಿಶ್ವಕಪ್ ಟೂರ್ನಿಯು ಹೊಸ ಮಾದರಿಯಲ್ಲಿ ನಡೆಯಲಿದ್ದು, ವೆಸ್ಟ್​ ಇಂಡೀಸ್​ ಮತ್ತು ಅಮೆರಿಕ ಆತಿಥ್ಯ ವಹಿಸಲಿದೆ.

ಹೊಸ ಮಾದರಿಯಲ್ಲಿ ವಿಶೇಷತೆ ಏನೆಂದರೆ, 2024ರಲ್ಲಿ ನಡೆಯುವ ಟೂರ್ನಿಯಲ್ಲಿ 20 ತಂಡಗಳು ಕಾದಾಟ ನಡೆಸಲಿದೆ.
5 ತಂಡಗಳ 4 ಗುಂಪುಗಳನ್ನಾಗಿ ವಿಂಗಡಿಸಲಾಗುತ್ತದೆ. ಮೊದಲ ಸುತ್ತಿನ ಪಂದ್ಯಗಳು ಮುಗಿದ ಬಳಿಕ ಸೂಪರ್ 8 ಮಾದರಿಯಲ್ಲಿ ಸ್ಪರ್ಧೆ ನಡೆಸಲಾಗುತ್ತದೆ.

ಈ ಹಿಂದೆ ಒಟ್ಟು 16 ತಂಡಗಳು ಪಾಲ್ಗೊಂಡಿದ್ದವು. ಅರ್ಹತಾ ಹಂತದಲ್ಲಿ 8 ತಂಡಗಳು ಆಡುತ್ತಿದ್ದವು. ಇಲ್ಲಿ ಅಗ್ರ 4 ಸ್ಥಾನ ಪಡೆದ ತಂಡಗಳು ಸೂಪರ್‌ 12ಹಂತಕ್ಕೆ ಆಯ್ಕೆಯಾಗುತ್ತಿದ್ದವು. ಸೂಪರ್‌-12ರಲ್ಲಿ ಅದಾಗಲೇ 8 ತಂಡಗಳು ಉತ್ತಮ ರ್‍ಯಾಂಕಿಂಗ್‌ ಆಧಾರದಲ್ಲಿ ಸ್ಥಾನ ಪಡೆದಿರುತ್ತಿದ್ದವು. ಸೂಪರ್‌-12 ಹಂತದಲ್ಲಿ ತಂಡಗಳನ್ನು ತಲಾ 6 ತಂಡಗಳ 2 ಗುಂಪುಗಳನ್ನಾಗಿ ವಿಂಗಡಿಸಲಾಗಿತ್ತು. ಇಲ್ಲಿ ಅಗ್ರ 4 ಸ್ಥಾನ ಪಡೆದ ತಂಡಗಳು ಸೆಮಿಫೈನಲ್‌ಗೇರುತ್ತಿದ್ದವು.

ಇದೀಗ ಮುಂಬರುವ ಆವೃತ್ತಿಯಲ್ಲಿ ಪ್ರತಿ ನಾಲ್ಕು ಗುಂಪಿನಿಂದ ಅಗ್ರ ಎರಡು ತಂಡಗಳು ಸೂಪರ್ 8 ಹಂತಕ್ಕೆ ಪ್ರವೇಶಿಸಲಿವೆ. ಮತ್ತೆ ಅವುಗಳನ್ನು ನಾಲ್ಕು ತಂಡಗಳ ಎರಡು ಗುಂಪುಗಳಾಗಿ ವಿಭಜಿಸಲಾಗುತ್ತದೆ. ಈ ಎರಡೂ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿದ್ದು, ಆ ಬಳಿಕ ಫೈನಲ್ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!