ವಾಟ್ಸಪ್‌ ನಲ್ಲಿ ನಿಮಗೆ ನೀವೇ ಮೆಸೇಜ್‌ ಮಾಡಿಕೊಳ್ಳಬಹುದು.. ಅದು ಹೇಗೆ ಗೊತ್ತಾ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ದೈನಂದಿನ ಬದುಕಿನ ಬ್ಯುಸಿ ಶೆಡ್ಯೂಲ್‌ ನಲ್ಲಿ ಅನೇಕ ಸಂಗತಿಗಳನ್ನು ನೆನಪಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ಅಂತಹ ಸಮಯಗಳಲ್ಲಿ ನೆನಪಿಡಬೇಕಾದ ವಿಷಯವನ್ನು ಹಾಳೆಯ ಮೇಲೆ ಬರೆಯವುದು ಅಥವಾ ಮೊಬೈಲ್‌ ನಲ್ಲಿರುವ ನೋಟ್‌ಪ್ಯಾಡ್‌ ಗಳಲ್ಲಿ ಗೀಚುವುದನ್ನು ಮಾಡುತ್ತೇವೆ. ಆದರೆ ಸಾಮಾನ್ಯ ಬಳಕೆಯ ವಾಟ್ಸಪ್‌ ನಲ್ಲಿ ಸಂದೇಶಗಳನ್ನು ಇನ್ನೊಬ್ಬರ ಇನ್‌ಬಾಕ್ಸ್‌ ನಲ್ಲಿ ಬರೆಯುವ ಅಭ್ಯಾಸವನ್ನೂ ಕೂಡ ಕೆಲವರು ರೂಡಿಸಿಕೊಂಡಿರುತ್ತಾರೆ. ಆದರೆ ಇನ್ಮುಂದೆ ಅಗತ್ಯ ಸಂದೇಶಗಳನ್ನು ನಿಮಗೆ ನೀವೇ ಕಳಿಸಿಕೊಳ್ಳಬಹುದು. ಅದ್ಹೇಗೆ ಅಂತೀರಾ ? ಅಂತಹ ಹೊಸ ಫೀಚರ್‌ ಅನ್ನು ಮೆಟಾ ಮಾಲೀಕತ್ವದ ವಾಟ್ಸಾಪ್‌ ಪರಿಚಯಿಸಿದೆ.

ನಿಮಗೆ ನೀವೇ ಸಂದೇಶ ಕಳುಹಿಸಿಕೊಳ್ಳುವುದು ಹೇಗೆ ? :

ಮೊದಲು ವಾಟ್ಸಾಪ್‌ ಅನ್ನು ತೆರೆಯಿರಿ ಆಗ ಎಲ್ಲಾ ಚಾಟ್‌ಗಳು ನಿಮ್ಮ ಕಣ್ಣ ಮುಂದೆ ಬರಲಿದೆ. ಆಗ ಅಲ್ಲೇ ಕೆಳಗಡೆ ಬಲ ಬದಿಗೆ ಪರದೆಯ ಮೇಲೆ ಮೆಸೇಜ್‌ ಐಕಾನ್‌ ಸಿಗಲಿದೆ. ಅದನ್ನು ಒತ್ತಿ ಮುಂದಕ್ಕೆ ಹೋದರೆ ನಿಮಗೆ ನ್ಯೂ ಗ್ರೂಪ್‌, ನ್ಯೂ ಕಾಂಟ್ರಾಕ್ಟ್‌ ಮತ್ತು ನ್ಯೂ ಕಮ್ಯುನಿಟಿ ಎಂಬ ಮೂರು ಆಯ್ಕೆಗಳು ಸಿಗಲಿವೆ. ನಂತರ ಕೇಳಗೆ ನಿಮ್ಮ ಹೆಸರಿನ ಆಯ್ಕೆ ಸಿಗಲಿದೆ ಅಲ್ಲಿಗೆ ನಿಮಗೆ ಬೇಕಾದ ಸಂದೇಶಗಳನ್ನು ಕಳುಹಿಸಿಕೊಳ್ಳಬಹುದು.

ನೀವು ಯಾವಾಗ ಬೇಕಾದರೂ ನಿಮಗೆ ಸಂದೇಶಗಳನ್ನು ಕಳುಹಿಸಿಕೊಳ್ಳಲು ವಾಟ್ಸಾಪ್‌ ಈ ಮೂಲಕ ಸಹಕಾರಿಯಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!