ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ವೆರಿಫೈಡ್‌ ಖಾತೆಗಳಿಗೆ ಮಾಸಿಕ ಶುಲ್ಕ : ಮೆಟಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಟ್ವಿಟರ್‌ ಬೆನ್ನಲ್ಲೇ ಇದೀಗ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ನ ವೆರಿಫೈಡ್‌ ಖಾತೆಗಳಿಗೆ ಮಾಸಿಕ ಚಂದಾದಾರಿಗೆ ಶುಲ್ಕ ವಿಧಿಸಲಾಗುವುದು ಎಂದು ಮೆಟಾ ಹೇಳಿದೆ.

ಈ ಬಗ್ಗೆ ಮೆಟಾ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ಅವರು ಭಾನುವಾರ ಘೋಷಣೆ ಮಾಡಿದ್ದು, ಪ್ರಾಯೋಗಿಕ ಹಂತವಾಗಿ ಈ ವಾರದಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ನಲ್ಲಿ ಈ ಯೋಜನೆಯನ್ನು ಪ್ರಾರಂಭ ಮಾಡಲಾಗುವುದು ಎಂದು ಹೇಳಿದ್ದಾರೆ. ಅಲ್ಲದೇ ಶೀಘ್ರವೇ ಬೇರೆ ದೇಶಗಳಿಗೂ ವಿಸ್ತರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ವೆಬ್‌ ಬಳಕೆದಾರರಿಗೆ ಮಾಸಿಕ $ 11.99 (ಸುಮಾರು ₹ 984.49) ಹಾಗೂ ಆ್ಯಪಲ್‌ ಹಾಗೂ ಆ್ಯಂಡ್ರಾಯ್ಡ್‌ ಬಳಕೆದಾರರಿಗೆ ಮಾಸಿಕ $ 14.99 ( ಸುಮಾರು ₹ 1240.12) ವಿಧಿಸುವುದಾಗಿ ಅವರು ತಿಳಿಸಿದ್ದಾರೆ.

“ಈ ವಾರ ನಾವು ಮೆಟಾ ವೆರಿಫೈಡ್ ಅನ್ನು ಹೊರತರಲು ಪ್ರಾರಂಭಿಸುತ್ತಿದ್ದೇವೆ – ಇದು ನಿಮ್ಮ ಖಾತೆಯನ್ನು ಸರ್ಕಾರಿ ID ಯೊಂದಿಗೆ ಪರಿಶೀಲಿಸಲು, ನೀಲಿ ಬ್ಯಾಡ್ಜ್ ಅನ್ನು ಪಡೆಯಲು, ನೀವು ಎಂದು ಹೇಳಿಕೊಳ್ಳುವ ಖಾತೆಗಳ ವಿರುದ್ಧ ರಕ್ಷಣೆಯನ್ನು ಪಡೆಯಲು ಮತ್ತು ಗ್ರಾಹಕರ ಬೆಂಬಲಕ್ಕೆ ನೇರ ಪ್ರವೇಶವನ್ನು ಪಡೆಯಲು ಅನುಮತಿಸುವ ಚಂದಾದಾರಿಕೆ ಸೇವೆ ,” ಎಂದು ಜುಕರ್‌ಬರ್ಗ್ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಎರಡು ತಿಂಗಳ ಹಿಂದಷ್ಟೇ ಟ್ವಿಟರ್‌ ಕೂಡ ವೆರಿಫೈಡ್‌ ಖಾತೆಗಳಿಗೆ ಮಾಸಿಕ $ 8 ವಿಧಿಸುವ ಚಂದಾದಾರಿಕೆ ಯೋಜನೆಯನ್ನು ಪರಿಚಯಿಸಿತ್ತು.

ಮೆಟಾ ಪರಿಶೀಲನೆಗಾಗಿ ಬಳಕೆದಾರರು ಕನಿಷ್ಟ ಚಟುವಟಿಕೆಯ ಅವಶ್ಯಕತೆಗಳನ್ನು ಪೂರೈಸಬೇಕು, ಕನಿಷ್ಠ 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು ಮತ್ತು ಸರ್ಕಾರಿ ಐಡಿಯನ್ನು ಸಲ್ಲಿಸಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!