spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಿಧಾನ ಪರಿಷತ್ ಚುನಾವಣೆ; ಬಿಜೆಪಿಗೆ ಅತ್ಯಂತ ಹೆಚ್ಚು ಸ್ಥಾನಗಳ ಗೆಲುವು: ಸಚಿವೆ ಶೋಭಾ

- Advertisement -Nitte

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಈ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅತ್ಯಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಪರಿಷತ್‌ನಲ್ಲಿ ಬಹುಮತ ಸಾಬೀತುಪಡಿಸಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ಸ್ಥಾನಗಳನ್ನು ಹೊಂದಿರುವ 5 ಕ್ಷೇತ್ರಗಳಲ್ಲಿ ಒಂದೊಂದು ಅಭ್ಯರ್ಥಿಯನ್ನು ಮಾತ್ರ ಹಾಕಿದೆ. ಈ ಕ್ಷೇತ್ರಗಳಲ್ಲಿ ಬಿಜೆಪಿ-ಕಾಂಗ್ರೆಸ್ ತಲಾ 5 ಸ್ಥಾನಗಳನ್ನು ಈಗಾಗಲೇ ಗೆದ್ದಂತಾಗಿದೆ. ಇನ್ನುಳಿದ 15 ಸ್ಥಾನಗಳ ಪೈಕಿ ಬಿಜೆಪಿ 12 ರಿಂದ 13 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ದೊಡ್ಡ ಸಂಖ್ಯೆಯ ಗ್ರಾ.ಪಂ.ಸದಸ್ಯರು ಬಿಜೆಪಿ ಬೆಂಬಲಿಗರಾಗಿದ್ದಾರೆ. ಅವರು ಚಿಹ್ನೆ ಮೇಲೆ ಗೆದ್ದಿಲ್ಲವಾದರೂ, ಪ್ರತಿ ಪಂಚಾಯ್ತಿಯಲ್ಲಿ ಬಿಜೆಪಿ ಕಾರ್ಯಕರ್ತರು ಯಾರೆಲ್ಲಾ ಗೆದ್ದಿದ್ದಾರೆ ಎನ್ನುವುದು ನಮಗೆ ಸ್ಪಷ್ಟವಿದೆ. ಗ್ರಾ.ಪಂ.ನಲ್ಲಿ ನಮ್ಮ ಕಾರ್ಯಕರ್ತರನ್ನೇ ನಿಲ್ಲಿಸಿ ಗೆಲ್ಲಿಸಿದ್ದೇವೆ. ಬಿಜೆಪಿ ಪರವಾದ ವಾತಾವರಣ ಇಡೀ ರಾಜ್ಯದಲ್ಲಿ ಕಂಡುಬರುತ್ತಿದೆ ಎಂದರು.
ಕೋಲಾರದ ಅಭ್ಯರ್ಥಿಯಾರು? ಯಾವ ಆಧಾರದಲ್ಲಿ ಟಿಕೆಟ್ ಕೊಟ್ಟಿರಿ? ಅದು ನಿಮ್ಮ ಆಂತರಿಕ ವಿಚಾರವಾದರೂ ಮೇಲ್ಮನೆಗೆ ಹೋಗುವ ವ್ಯಕ್ತಿ ಹೇಗಿರಬೇಕು. ಬ್ಲೇಡ್ ಹಿಡಿದವರು, ತಲವಾರು ಹಿಡಿದವರು, ವಂಚನೆ ಮಾಡುವವರನ್ನು ಕಳಿಸಿದರೆ ನಮ್ಮ ಪರಿಸ್ಥಿತಿ ಏನು ಎಂದು ಕಾಂಗ್ರೆಸ್‌ನ್ನು ಪ್ರಶ್ನಿಸಿದರು.
ಅಂತಹವರನ್ನು ಆಯ್ಕೆ ಮಾಡುವ ಮಟ್ಟಕ್ಕೆ ಕಾಂಗ್ರೆಸ್‌ನ ಚಾರಿತ್ರ್ಯ ಇಳಿದಿದೆ ಎನ್ನುವುದಕ್ಕೆ ಇದು ತಾಜಾ ಉದಹರಣೆ. ಇದರ ಬಗ್ಗೆ ಕಾಂಗ್ರೆಸ್ ಅವಲೋಕನ ಮಾಡಿಕೊಳ್ಳಬೇಕು ಎಂದರು.
50 ವರ್ಷಗಳ ಸುಧೀರ್ಘ ಕಾಲ ಕಾಂಗ್ರೆಸ್ ದೇಶವನ್ನಾಳಿದರೂ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಆದ ನಂತರವೇ ಕೇಂದ್ರದ ಹಣವನ್ನೂ ಹಳ್ಳಿಗಳಿಗೆ ಕೊಡಬಹುದು ಎನ್ನುವುದು ಗೊತ್ತಾಯಿತು. ಸರ್ವಶಿಕ್ಷಾ ಅಭಿಯಾನದ ಮೂಲಕ ನಮ್ಮೂರಿನ ಹಳ್ಳಿಗಳಿಗೆ ಹಣ ಹರಿದು ಬಂತು. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಮೂಲಕ ಹಳ್ಳಿಗಳ ರಸ್ತೆ ಅಭಿವೃದ್ಧಿ ಮಾಡಬಹುದು ಎನ್ನುವುದು ಅರಿವಿಗೆ ಬಂತು ಎಂದರು.
ನಂತರ 10 ವರ್ಷಗಳ ಕಾಲ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಇತ್ತು. ಅವರು ರಾಜ್ಯಕ್ಕೆ ಅಥವಾ ಕೇಂದ್ರಕ್ಕೆ ಕೊಟ್ಟ ಕೊಡುಗೆ ಏನು? ಯಾವುದಾದರೂ ಒಂದನ್ನು ಕಾಂಗ್ರೆಸಿಗರು ನೆನಪು ಮಾಡಿ ಹೇಳಲಿ ಇದು ನನ್ನ ಸವಾಲು ಎಂದರು.
ನರೇಂದ್ರ ಮೋದಿ ದೇಶದ ಪ್ರಧಾನಿ ಆದ ಮೇಲೆ ಮೊದಲ ಬಾರಿಗೆ 13 ನೇ ಹಣಕಾಸು ಆಯೋಗದ ಮೂಲಕ ನೇರವಾಗಿ ಗ್ರಾ.ಪಂ.ಗಳಿಗೆ ಅನುದಾನ ಬಂತು ಎನ್ನುವುದು ಸತ್ಯ. ಮೊದಲ ಹಣಕಾಸು ಆಯೋಗದಿಂದ ಹಿಡಿದು 12 ನೇ ಹಣಕಾಸು ಆಯೋಗದ ವರೆಗೆ ಕಾಂಗ್ರೆಸ್ ಸರ್ಕಾರವೇ ಇತ್ತು. ನೀವೇಕೆ ಕೊಡಲಿಲ್ಲ, ನಿಮಗೆಯಾರು ತಡೆದಿದ್ದರು ಎಂದು ಪ್ರಶ್ನಿದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss