Tuesday, June 28, 2022

Latest Posts

ವಿಧಾನ ಪರಿಷತ್ ಚುನಾವಣೆ: ಕಲಬುರಗಿಯಲ್ಲಿ ಶೇ.12.63ರಷ್ಟು ಮತದಾನ

ಹೊಸ ದಿಗಂತ ವರದಿ ಕಲಬುರಗಿ:

ಗುಲಬರ್ಗಾ ಸ್ಥಳೀಯ ಸಂಸ್ಥೆಗಳಿಂದ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ಮತದಾನ ಆರಂಭವಾಗಿದ್ದು, ಬೆಳಿಗ್ಗೆ 10 ಗಂಟೆ ವರೆಗೆ 893 ಮತದಾರರಿಂದ ಶೇ.12.63 ರಷ್ಟು ಮತದಾನವಾಗಿದೆ.

ಇದೇ ಸಂದರ್ಭದಲ್ಲಿ ಜೇವರ್ಗಿ, ಯ ಫರತಾಬಾದ್ ಗ್ರಾಮ ಪಂಚಾಯಿತಿ ಮತಗಟ್ಟೆ ಸಂಖ್ಯೆ 213ಕ್ಕೆ ಕಲಬುರಗಿ ಸಹಾಯಕ ಆಯುಕ್ತೆ ಮೋನಾ ರೂಟ್ ಅವರು ವಿಕ್ಷಣೆ ಮಾಡಿದರು.

ಕಲಬುರಗಿ ತಹಶಿಲ್ದಾರರಾದ ಪ್ರಕಾಶ ಕುದ್ರಿ ಅವರು ಉಪಸ್ಥಿತರಿದ್ದರು. ಈ ಮತಗಟ್ಟೆ ಯಲ್ಲಿ ಒಟ್ಟು 20 ಮತಗಳಿದ್ದು, 10 ಮಹಿಳಾ ಹಾಗೂ 10 ಪುರಷ ಮತದಾರಿದ್ದಾರೆ, ಬೆಳಿಗ್ಗೆ 10 ಗಂಟೆಯವರೆಗೆ ಒಂದು ಮತದಾನ ಕೂಡ ಆಗದಿರುವುದು ಕಂಡುಬಂದಿದೆ.

ಅದರಂತೆ ನಂದಿಕೂರ ಗ್ರಾಮ ಪಂಚಾಯಿತಿ ಮತಗಟ್ಟೆ 198 ಸಂಖ್ಯೆಯಲ್ಲಿ ಒಟ್ಟು 32 ಮತಗಳಿದ್ದು, ಬೆಳಿಗ್ಗೆ 10:30 ಗಂಟೆಯವರೆಗೆ ಒಟ್ಟು 19 ಮತದಾನಗಳು ನಡೆದಿವೆ.

ಈ ಸಂದರ್ಭದಲ್ಲಿ ಉದನೂರ ಗ್ರಾಮ ಪಂಚಾಯತ್ ಸದಸ್ಯ ಶಿವಪುತ್ರಪ್ಪಾ ಮಾಲಿ ಪಾಟೀಲ್ ಮಾತನಾಡಿ, ಪರಿಷತ್ ಚುನಾವಣೆಯಲ್ಲಿ ಗೆದ್ದು ಬರುವವರು ಪಂಚಾಯತ್ ಅಭಿವೃದ್ಧಿ ಗೆ ಕಾಳಜಿ ವಹಿಸಿ,ಅಳಲನ್ನು ನೋಡಬೇಕು. 2 ಕಳೆದರೂ ಮನೆಗಳಿಲ್ಲ. ಅದರಂತೆ ಸಿಬ್ಬಂದಿಗಳಿಗೆ, ಸದಸ್ಯರು ಗಳಿಗೆ ವೇತನ ಸರಿಯಾಗಿ ನೀಡಬೇಕೆಂದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಚಂದ್ರಕಾಂತ ಸಿರಸಗಿ, ಶ್ರೀನಿವಾಸ ದೊಡ್ಡಮನಿ, ಶಿವರಾಜ್ ಬಿರಾದಾರ, ಶರಣಬಸಪ್ಪಾ ಬಿರಾದಾರ, ಶಾಂತಾಬಾಯಿ ಶೆಡೂಲಕರ್,ಶ್ರೀಕಾಂತ್, ಚಂದ್ರಕಾಂತ ಪೂಜಾರಿ,ಲಕ್ಕಪ್ಪಾ ಪೂಜಾರಿ, ಭೀಮಾಶಂಕರ ನಾಗನಹಳ್ಳಿ ಸೇರಿದಂತೆ ಇತರರು ಮತಗಟ್ಟೆಗೆ ತೆರಳಿ ಮತಯಾಚನೆ ಮಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss