ಹೆಣ್ಣುಮಕ್ಕಳಿಗೆ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ. ಮುಖದ ಮೇಲೆ ಒಂದು ಸಣ್ಣ ಮೊಡವೆ ಬಂದರೂ ತಾಳಲಾರರು. ಹಾಗಿರುವ ಮುಖದ ಅಂದ ಹೆಚ್ಚಿಸುವ ಕಣ್ಣಿನ ರೆಪ್ಪೆಯ ಆರೈಕೆ ಮಾಡದಿದ್ದರೆ ಹೇಗೆ ಅಲ್ವಾ? ನಿಮಗೆ ಕಣ್ಣಿನ ರೆಪ್ಪೆ ಉದುರುತ್ತಾ? ತುಂಬಾ ಸಣ್ಣದಾದಿದ್ಯಾ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ ರೆಪ್ಪೆಯನ್ನು ಕಾಪಾಡಿಕೊಳ್ಳಿ..
- ಆಲೀವ್ ಆಯಿಲ್ ಹಚ್ಚುವುದರಿಂದ ಎಣ್ಣೆಯಲ್ಲಿರುವ ಫ್ಯಾಟಿ ಆಸಿಡ್ಸ್ ನಿಂದ ಕಣ್ಣಿನ ರೆಪ್ಪೆ ಮಾಯಿಸ್ಚರ್ ಆಗುತ್ತದೆ.
- ಐಲ್ಯಾಷ್ ಗಳಿಗೆ ಸಿಗುವ ಸೆರಮ್ ಅನ್ನು ಬಳಸಿ ಇದರಿಂದ ನಿಮ್ಮ ಕಣ್ಣಿನ ರೆಪ್ಪೆ ಬೆಳೆಯೋಕೆ ಸಹಾಯ ಮಾಡುತ್ತದೆ.
- ರೆಪ್ಪೆಗಳಿಗೆ ವಿಟಮಿನ್ ಇ ಎಣ್ಣೆ ಹಚ್ಚುವುದರಿಂದ ರೆಪ್ಪೆ ಉದುರುವುದು ಕಡಿಮೆಯಾಗುತ್ತದೆ.
- ಜೋಪಾನವಾಗಿ ಕಣ್ಣಿಗೆ ಅಲೋವೆರಾ ಹೋಗದಂತೆ ರೆಪ್ಪೆಗಳಿಗೆ ಮಾತ್ರ ಹಚ್ಚಿದರೆ ರೆಪ್ಪೆ ಬೆಳೆಯುತ್ತದೆ.
- ಮಲಗುವ ಮುನ್ನ ತಪ್ಪದೇ ಮೇಕ್ ಅಪ್ ರಿಮೂವ್ ಮಾಡಿ.
- ನೀವಾಗಿಯೇ ಕಣ್ಣಿನ ರೆಪ್ಪೆಯನ್ನು ಕೀಳಬೇಡಿ. ಅಥವಾ ಟ್ರಿಮ್ ಮಾಡಿಸಬೇಡಿ.
- ಕೊಬ್ಬರಿ ಎಣ್ಣೆ, ವ್ಯಾಸಲೀನ್ ಹಚ್ಚುವುದರಿಂದ ಕಣ್ಣಿನ ರೆಪ್ಪೆ ಮಾಯಿಸ್ಚರ್ ಆಗುತ್ತದೆ. ಇದು ರೆಪ್ಪೆ ಬೆಳೆಯೋಕೆ ಸಹಾಯ ಮಾಡಲಿದೆ.