Wednesday, June 29, 2022

Latest Posts

ದೆಹಲಿ ಮೆಟ್ರೋ ರೈಲಿನ ಪ್ರಯಾಣಿಕರಿಗೆ ಉಚಿತ ಇಂಟರ್ನೆಟ್!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಇನ್ಮುಂದೆ ದೆಹಲಿಯ ಮೆಟ್ರೋ ರೈಲಿನ ಹಳದಿ ಮಾರ್ಗದ ಪ್ರಯಾಣಿಕರಿಗೆ ಉಚಿತ ಇಂಟರ್ನೆಟ್ ಸಿಗಲಿದೆ ಎಂದು ಡಿಎಂಆರ್ ಸಿ ಅಧಿಕಾರಿಗಳು ತಿಳಿಸಿದ್ದಾರೆ.
ಮೆಟ್ರೊ ರೈಲಿನ ಹಳದಿ ಮಾರ್ಗದಲ್ಲಿ ಹೈಸ್ಪೀಡ್‌ ಸಾಮರ್ಥ್ಯದ ವೈ-ಫೈ ಉಚಿತ ಸೇವೆ ಆರಂಭಿಸಲಾಗಿದೆ. ಈ ಹೈ-ಸ್ಪೀಡ್ ಉಚಿತ ವೈ-ಫೈ ಸೇವೆಯು ದೆಹಲಿ ವಿಶ್ವವಿದ್ಯಾನಿಲಯದ ಉತ್ತರ ದೆಹಲಿ ಕ್ಯಾಂಪಸ್‌ಗೆ ಮತ್ತು ಅಲ್ಲಿಂದ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ.
ಜನವರಿ 2020ರಲ್ಲಿ ದೆಹಲಿ ಮತ್ತು ದ್ವಾರ್ಕಾ ಸೆಕ್ಟರ್ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಕೋಚ್‌ ಒಳಗಡೆ ವೈ-ಫೈ ಸೌಲಭ್ಯ ಕಲ್ಪಿಸಲಾಗಿತ್ತು.
ಇದೀಗ ಹಳದಿ ಮಾರ್ಗದಲ್ಲಿಯೂ ಈ ಸೌಲಭ್ಯ ಒದಗಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss