ಹೊಸದಿಗಂತ ಆನ್ ಲೈನ್ ಡೆಸ್ಕ್:
ದೆಹಲಿ ಮೆಟ್ರೋ ಮಾಜಿ ಮುಖ್ಯಸ್ಥ, ಮೆಟ್ರೋ ಮ್ಯಾನ್ ಎಂದ ಖ್ಯಾತರಾಗಿರುವ ಇ. ಶ್ರೀಧರನ್ ಗುರುವಾರ ಬಿಜೆಪಿಗೆ ಅಧಿಕೃತ ಸೇರ್ಪಡೆಗೊಂಡಿದ್ದಾರೆ.
ಕೇರಳದ ಮಲ್ಲಪುರಂ ನಲ್ಲಿ ನಡೆಸ ಬಿಜೆಪಿ ವಿಜಯ ಯಾತ್ರೆಯಲ್ಲಿ ಇ. ಶ್ರೀಧರನ್ ಅವರು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಶ್ರೀಧರನ್ ಅವರು ಮುಂಬರುವ ಕೇರಳ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಗಳಿವೆ.
ಕೇರಳದಲ್ಲಿ ಬಿಜಿಪಿಯನ್ನು ಅಧಿಕಾರಕ್ಕೆ ತರುವ ಸಲುವಾಗಿ ತಾನು ರಾಜಕೀಯ ಪ್ರವೇಶಿಸುತ್ತಿರುವುದಾಗಿ ಶ್ರೀಧರನ್ ಹೇಳಿದ್ದಾರೆ. ಕೇರಳದಲ್ಲಿ ಮುಂದಿನ ಚುನಾವಣೆಯಲ್ಲಿ ಅಧಿಕಾರ ಪಡೆಯಬೇಕು ಎಂದು ಬಿಜೆಪಿ ಸಕಲ ರೀತಿಯ ಪ್ರಯತ್ನ ನಡೆಸುತ್ತಿದೆ.