ಬೆಂಗಳೂರಿನ ಎಂಜಿ ರೋಡ್‌ ದೇಶದ ನಂ.1 ಶಾಪಿಂಗ್‌ ಸ್ಟ್ರೀಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು ಅನೇಕರ ಅಚ್ಚುಮೆಚ್ಚಿನ ನಗರ. ಈಗಾಗಲೇ ಹಲವು ಕಾರಣಗಳಿಂದ ಪ್ರಮುಖ ನಗರಗಳಲ್ಲಿ ಬೆಸ್ಟ್​ ಸಿಟಿಯಾಗಿ ರೂಪುಗೊಂಡಿರುವ ಬೆಂಗಳೂರು ನಗರಕ್ಕೆ ಇದೀಗ ಮತ್ತೊಂದು ಗರಿ ಮೂಡಿದೆ. ದೇಶದ ಅತ್ಯುತ್ತಮ ಶಾಪಿಂಗ್​ ಸ್ಟ್ರೀಟ್​ನಲ್ಲಿ ಬೆಂಗಳೂರಿನ ನಾಲ್ಕು ರಸ್ತೆಗಳು ಮೊದಲ ಹತ್ತು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಎಂಜಿ ರೋಡ್​ ಮೊದಲ ಸ್ಥಾನದಲ್ಲಿದೆ.

ಉನ್ನತ ರಸ್ತೆಗಳಲ್ಲಿ ಗ್ರಾಹಕರಿಗೆ ಅತ್ಯುತ್ತಮ ಶಾಪಿಂಗ್​ ಅನುಭವ ನೀಡುವ ಗುಣಮಟ್ಟ ನಿರ್ಧರಿಸುವ ಕುರಿತು ರಿಯಲ್​ ಎಸ್ಟೇಟ್​ ಕನ್ಸಲ್ಟೆಂಟ್ ನೈಟ್​ ಫ್ರಾಂಕ್​ ಇಂಡಿಯಾ ಸಂಸ್ಥೆ ಈ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ದೇಶದ ಅತ್ಯುತ್ತಮವಾದ ಹೈ ಸ್ಟ್ರೀಟ್​ಗಳ ಪಟ್ಟಿ ಮಾಡಲಾಗಿದೆ. ಅದರಲ್ಲಿ ಬೆಂಗಳೂರಿನ ಎಂಜಿ ರೋಡ್​​ ಪ್ರಥಮ ಸ್ಥಾನ ಪಡೆದಿದೆ.

“ಥಿಂಕ್‌ ಇಂಡಿಯಾ: ಥಿಂಕ್‌ ರಿಟೇಲ್‌ 2023- ಹೈ ಸ್ಟ್ರೀಟ್‌ ರಿಯಲ್‌ ಎಸ್ಟೇಟ್‌ ಔಟ್‌ಲುಕ್‌’ ಎನ್ನುವ ಶೀರ್ಷಿಕೆಯೊಂದಿಗೆ, ಭಾರತದ 8 ಪ್ರಮುಖ ಮಾರುಕಟ್ಟೆಗಳಲ್ಲಿನ ಪ್ರಖ್ಯಾತ 30 ಶಾಪಿಂಗ್‌ ಸ್ಟ್ರೀಟ್‌ಗಳನ್ನು ಈ ಸಂಸ್ಥೆ ಪಟ್ಟಿ ಮಾಡಿತ್ತು. ಗ್ರಾಹಕರ ಶಾಪಿಂಗ್‌ ಅನುಭವಗಳನ್ನು ಆಧರಿಸಿ ಈ ಸಮೀಕ್ಷೆ ಮಾಡಲಾಗಿದೆ. ಅದರ ಪ್ರಕಾರ, ಮೊದಲ ಸ್ಥಾನದಲ್ಲಿ ಎಂಜಿ ರೋಡ್‌ ಇದ್ದರೆ, 2ನೇ ಸ್ಥಾನದಲ್ಲಿ ಹೈದರಾಬಾದ್‌ನ ಸೋಮಾಜಿಗುಡ ರಸ್ತೆ, 3ನೇ ಸ್ಥಾನದಲ್ಲಿ ಮುಂಬೈನ ಲಿಂಕಿಂಗ್‌ ರೋಡ್‌ ಹಾಗೂ 4ನೇ ಸ್ಥಾನದಲ್ಲಿ ದೆಹಲಿಯ ಸೌತ್‌ ಎಕ್ಸ್‌ಟೆನ್ಷನ್‌ ರಸ್ತೆ ಸ್ಥಾನ ಪಡೆದುಕೊಂಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!