Wednesday, August 10, 2022

Latest Posts

‘F.R.I.E.N.D.S’ ಖ್ಯಾತಿಯ ಮೈಕಲ್ ಟೈಲರ್ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಖ್ಯಾತ ಕಿರುತೆರೆ ನಟ ಮೈಕಲ್ ಟೈಲರ್ ನಿಧನರಾಗಿದ್ದಾರೆ. ಅಮೆರಿಕ ಕಿರುತೆರೆಯ ಕಾಮಿಡಿ ಸೀರಿಯಲ್ ಫ್ರೆಂಡ್ಸ್‌ನಲ್ಲಿ ಗಂಥರ್ ಪಾತ್ರ ನಿರ್ವಹಿಸಿದ ಟೈಲರ್ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದರು.
ಕಳೆದ ಕೆಲ ವರ್ಷಗಳಿಂದ ಟೈಲರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ನಿನ್ನೆ ಲಾಸ್ ಏಂಜಲಿಸ್‌ನ ತಮ್ಮ ನಿವಾಸದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

See the source image 1994 ರಲ್ಲಿ ಆರಂಭವಾದ ಫ್ರೆಂಡ್ಸ್ ಸೀರೀಸ್ 2004 ರವರೆಗೂ ಪ್ರಸಾರವಾಯ್ತು. ಈಗಲೂ ಫ್ರೆಂಡ್ಸ್ ಸೀರೀಸ್ ನೆಟ್‌ಫ್ಲಿಕ್ಸ್‌ನ ಟಾಪ್10 ನಲ್ಲಿಯೇ ಇದೆ.
150 ಕ್ಕೂ ಹೆಚ್ಚು ಎಪಿಸೋಡ್‌ಗಳಲ್ಲಿ ಟೈಲರ್ ಕಾಣಿಸಿಕೊಂಡಿದ್ದು, ಸೆಂಟ್ರಲ್ ಪರ್ಕ್ ಕಾಫಿಶಾಪ್‌ನ ಮಾಲೀಕ ಗಂಥರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss