Tuesday, July 5, 2022

Latest Posts

ರಾಜಸ್ಥಾನದಲ್ಲಿ ಮಿಗ್‌-21 ವಿಮಾನ ಪತನ: ವಿಂಗ್‌ ಕಮಾಂಡರ್‌ ಹರ್ಷಿತ್‌ ಸಿನ್ಹಾ ದುರ್ಮರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತಡರಾತ್ರಿ ಭಾರತೀಯ ವಾಯುಸೇನೆಯ ಮಿಗ್‌-21 ವಿಮಾನ ಪತನಗೊಂಡಿದ್ದು, ಇದರ ಪರಿಣಾಮ ವಿಂಗ್‌ ಕಮಾಂಡರ್‌ ಹರ್ಷಿತ್‌ ಸಿನ್ಹಾ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾಹಿತಿ ಖಚಿತಪಡಿಸಿದ ಐಎಎಫ್‌, ಶುಕ್ರವಾರ ರಾತ್ರಿ 8:30ರ ವೇಳೆಗೆ ಮಿಗ್‌ 21 ವಿಮಾನ ರಾಜಸ್ಥಾನದ ಜೈಸಲ್ಮೇರ್‌ ಜಿಲ್ಲೆಯಲ್ಲಿ ಪತನಗೊಂಡಿದ್ದು, ಈ ಘಟನೆಯಲ್ಲಿ ವಿಂಗ್‌ ಕಮಾಂಡರ್‌ ಹರ್ಷಿತ್‌ ಸಿನ್ಹಾ ಮೃತಪಟ್ಟಿದ್ದಾರೆ ಎಂದು ಟ್ವೀಟ್‌ ಮೂಲಕ ಮಾಹಿತಿ ನೀಡಿದೆ. ವಿಮಾನ ಪತನಗೊಂಡ ಬಗ್ಗೆ ಮೊದಲು ಅರಣ್ಯ ಸಿಬ್ಬಂದಿ ಗುರುತಿಸಿದ್ದು, ಬಳಿಕ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss