Thursday, July 7, 2022

Latest Posts

MIG-29K ತರಬೇತಿ ಯುದ್ಧ ವಿಮಾನ ಪತನ: ಓರ್ವ ಪೈಲಟ್ ನಾಪತ್ತೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಮಿಗ್-29ಕೆ ನೌಕಾಪಡೆಯ ತರಬೇತಿ ವಿಮಾನ  ಗುರುವಾರ ಸಂಜೆ ಅರಬ್ಬಿ ಸಮುದ್ರದಲ್ಲಿ ಪತನಗೊಂಡಿದ್ದು, ಓರ್ವ ಪೈಲಟ್‌ನನ್ನು ರಕ್ಷಿಸಲಾಗಿದ್ದು, ಮತ್ತೊಬ್ಬ ಪೈಲಟ್ ಗಾಗಿ ತೀವ್ರ ಶೋಧ ಕಾರ್ಯ ನಡೆಸಲಾಗಿದೆ.

ಮಿಗ್ 29ಕೆ ತರಬೇತಿ ಕಾರ್ಯಾಚರಣೆ ವೇಳೆ ಸಂಜೆ 5 ಗಂಟೆ ಸಮಯದಲ್ಲಿ ಪತನಗೊಂಡಿದ್ದು, ಓರ್ವ ಪೈಲಟ್‌ನನ್ನು ಪವಾಡವೆಂಬಂತೆ ರಕ್ಷಿಸಲಾಗಿದ್ದು, ಮತ್ತೊಬ್ಬ ಪೈಲಟ್ ಗಾಗಿ ತೀವ್ರ ಶೋಧ ಕಾರ್ಯ ನಡೆಸಲಾಗಿದೆ ಎಂದು ಭಾರತೀಯ ನೌಕಾಪಡೆ ಮಾಹಿತಿ ತಿಳಿಸಿದೆ.

ಈ ಘಟನೆ ದಿಢೀರ್ ಹೇಗೆ ಸಂಭವಿಸಿದೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ವಿಮಾನದಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಂಡ ಪರಿಣಾಮ ಅವಘಡ ಸಂಭವಿಸಿದೆ ಎಂಬುದನ್ನು ಪ್ರಾಥಮಿಕ ಹಂತದ ತನಿಖೆಯಲ್ಲಿ ವಾಯುಪಡೆ ಸ್ಪಷ್ಟಪಡಿಸಿದೆ. ಪ್ರಸ್ತುತ ಭಾರತೀಯ ನೌಕಾಪಡೆಯಲ್ಲಿ 40ಕ್ಕೂ ಹೆಚ್ಚು ಮಿಗ್ 29 ಕೆ ಸರಣಿಯ ಫೈಟರ್ ಜೆಟ್ ಗಳು ಕಾರ್ಯ ನಿರ್ವಹಿಸುತ್ತಿವೆ.

ಪಂಜಾಬ್‌ನ ಜಲಂಧರ್ ಬಳಿಯ ವಾಯಪಡೆಯ ನೆಲೆಯಿಂದ ತರಬೇತಿ ಕಾರ್ಯಾಚರಣೆಯಲ್ಲಿದ್ದ ಮಿಗ್- 29 ಯುದ್ಧ ವಿಮಾನ ಪತನಗೊಂಡಿತ್ತು. ಮೇ 8ರಂದು ಪಂಜಾಬ್ ನ ಜಲಂಧರ್ ನಲ್ಲಿಯೂ ಮಿಗ್- 29 ಪತನಗೊಂಡಿತ್ತು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss