Friday, July 1, 2022

Latest Posts

ಲಘು ಭೂಕಂಪಕ್ಕೆ ಜಿಲ್ಲೆಯ ಜನರು ಆತಂಕಪಡುವ ಅಗತ್ಯವಿಲ್ಲ: ಭೂವಿಜ್ಞಾನಿ ಶಶಿಧರ

ಹೊಸ ದಿಗಂತ ವರದಿ,ವಿಜಯಪುರ:

ಜಿಲ್ಲೆಯಲಿ ಆಗಾಗ ಲಘು ಭೂಕಂಪನ ಜೊತೆಗೆ ಭಾರಿ ಸದ್ದು ಕೇಳಿ ಬರುತ್ತಿರುವ ಹಿನ್ನೆಲೆ, ಜಿಲ್ಲಾಡಳಿತ ಹಾಗೂ ಜಿಲ್ಲಾಧಿಕಾರಿಗಳ ಆದೇಶದಂತೆ ಹೈದ್ರಾಬಾದ್‌ನಿಂದ ಆಗಮಿಸಿರುವ ವಿಶೇಷ ಪರಿಣಿತಯುಳ್ಳ ಗಣಿ, ಭೂ ವಿಜ್ಞಾನಿಗಳ ತಜ್ಞರ ತಂಡ ಬುಧವಾರ ಜಿಲ್ಲೆಗೆ ಭೇಟಿ ನೀಡಿ, ಲಘು ಭೂಕಂಪದ ಕುರಿತು ಪರಿಶೀಲಿಸಿ, ಮಸೂತಿ ಬಳಿ ಸೈಸ್ಮೋಮೀಟರ್ (ಭೂ ಕಂಪನ ಮಾಪನ ಯಂತ್ರ) ಅಳವಡಿಸಿತು.
ಈ ಸಂದರ್ಭ ಹೈದ್ರಾಬಾದ್ ಹಿರಿಯ ಭೂವಿಜ್ಞಾನಿ ಶಶಿಧರ ಡಿ. ಮಾತನಾಡಿ, ಜಿಲ್ಲೆಯಲ್ಲಿ ಆಗಾಗ ಸಂಭವಿಸುತ್ತಿರುವ ಲಘು ಭೂಕಂಪನದಿಂದ ಯಾವುದೇ ರೀತಿಯ ಜೀವ ಹಾನಿ, ಆಸ್ತಿ, ಪಾಸ್ತಿ ಹಾನಿ ಸಂಭವಿಸುವ ಸಂಭವ ತೀರ ಕಡಿಮೆಯಾಗಿದ್ದು, ಜಿಲ್ಲೆಯ ಜನರು ಅನಗತ್ಯ ಆತಂಕಪಡುವ ಅಗತ್ಯವಿಲ್ಲ ಎಂದರು.
ಮುಂದಿನ ದಿನಗಳಲ್ಲಿ ಇದರ ಪ್ರಮಾಣ ತಗ್ಗಬಹುದು. ಇದು ನಿಲ್ಲಲೂಬಹುದು. ಆದ್ದರಿಂದ ಜನರು ಆತಂಕಕ್ಕೊಳಗಾಗದೇ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದರು.
ಇಲ್ಲಿನ ಮಸೂತಿ ಗ್ರಾಮದಲ್ಲಿ ಸೈಸ್ಮೋಮೀಟರ್ ಅಳವಡಿಸಲಾಗಿದ್ದು, ಇನ್ನು ಮುಂದೆ ಇದರಲ್ಲಿ ಭೂ ಕಂಪನದ ಅತಿ ಸೂಕ್ಷ್ಮ ಮಾಹಿತಿ ಸೇರಿದಂತೆ ಪ್ರತಿ ಮಾಹಿತಿಯೂ ದಾಖಲಾಗಲಿದೆ. ಇದನ್ನು ಹೈದ್ರಾಬಾದ್‌ನಿಂದ ನಿಯಂತ್ರಿಸಲಾಗುತ್ತದೆ ಎಂದು ಹೇಳಿದರು.
ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ, ಹೈದ್ರಾಬಾದನ್ ನ್ಯಾಶನಲ್ ಜಿಯೋಫಿಜಿಕಲ್ ರಿಸರ್ಚ್ ಇನ್ಸಟ್ಯೂಟ್‌ನ ರಮೇಶ ದಿಕ್ಪಾಲ್, ಡಾ. ಸುರೇಶ ಬುಡಪಟ್ಟಿ, ಬೆಂಗಳೂರಿನ ಅಭಿನಯ ಬಿನೆ, ಪುಷ್ಪಾ ಟಿ.ವಿ., ಸುಭಾಶ್ಚಂದ್ರ ಎಸ್., ಮಹೇಶ ಬಿರಜನವರ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss